ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್
Update: 2026-05-28 11:24 IST
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಭಾವನಾತ್ಮಕ ಕ್ಷಣಕ್ಕೆ ಇಂದಿನ ಉಪಹಾರ ಸಭೆ ಸಾಕ್ಷಿಯಾಯಿತು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಪುಟ ಸಹದ್ಯೋಗಿಗಳಿಗಾಗಿ ಆಯೋಜಿಸಿದ್ದ ಉಪಹಾರ ಸಭೆಯಲ್ಲಿ ಭಾಗವಹಿಸಿದ ಶಿವಕುಮಾರ್, ಕಣ್ಣೀರು ಹಾಕುತ್ತಾ ಸಿಎಂ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ ಸಿದ್ದರಾಮಯ್ಯ ಸಹ ಭಾವುಕರಾದಂತೆ ಕಂಡು ಬಂತು.
ಉಪಹಾರ ಸಭೆಯಲ್ಲಿ ಎಲ್ಲಾ ಸಚಿವರನ್ನು ಉದ್ದೇಶಿಸಿ ಇಷ್ಟು ವರ್ಷ ನನಗೆ ಸಹಕಾರ ನೀಡಿದಕ್ಕಾಗಿ ಧನ್ಯವಾದಗಳು ಎಂದು ಸಿಎಂ ತಿಳಿಸಿದರು.