ಅತಿವೃಷ್ಟಿ: ಸೆ.15ರಿಂದ ಜೆಡಿಎಸ್ ಪ್ರವಾಸ
ಬೆಂಗಳೂರು, ಸೆ.14: ರಾಜ್ಯದಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ರೈತರ ಬೆಳೆ ನಷ್ಟವಾಗಿದ್ದು, ಸೋಮವಾರ (ಸೆ.15)ಯಿಂದ ಜೆಡಿಎಸ್ ಯುವಕ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಜೆಡಿಎಸ್ ಪ್ರವಾಸ ಕೈಗೊಳ್ಳಲಿದೆ.
ಮೊದಲಿಗೆ ಕಲಬುರಗಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದು, ನಂತರ ಕಲಬುರಗಿ ಜಿಲ್ಲೆಯ ಸೋಮನಾಥಹಳ್ಳಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳದ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಅಲ್ಲಿಂದ ಜೇವರ್ಗಿ ತಾಲೂಕಿನ ಕಟ್ಟಿಸಂಗವಿ, ಜೇವರ್ಗಿ ನಗರ, ಔರಾದ್, ಗಂವ್ಹಾರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾನಿಗೊಳದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ರೈತರ ಸಮಸ್ಯೆಗಳ ಕುರಿತು ಮಾತನಾಡಲಿದ್ದಾರೆ. ಸೆ.16 ರಂದು ಬೀದರ್ ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ಆ ಭಾಗದ ಮರಕಲ, ಅಲಿಯಂಬರ್, ಇಸ್ಲಾಮ್‌ಪುರ, ಜಾಂಪಾಡ್, ಮಳೆ ಹಾನಿ ಪ್ರದೇಶಗಳ ನೆರೆ ಸಂತ್ರಸ್ತರ ಸಮಸ್ಯೆಗಳ್ನು ಪಟ್ಟಿ ಮಾಡಲಿದ್ದಾರೆ. ಅಲ್ಲಿಂದ ಕಾಶಂಪೂರ್‌ಗೆ ಭೇಟಿ ನೀಡಿ ಬುಧೇರಾ, ಕಮಠಾಣ, ಮರ್ಜಾಪುರ ಮನೆಹಾನಿ ಪ್ರದೇಶಗಳಿಗೂ ಭೇಟಿ ನೀಡಲಿದ್ದಾರೆ ಎಂದು ಜೆಡಿಎಸ್ ಪ್ರಕಟನೆ ತಿಳಿಸಿದೆ.