ಬೆಂಗಳೂರು: ಆರೋಪಿಯು ಜನಪ್ರತಿನಿಧಿಯಾಗುವುದಕ್ಕೂ ಮುನ್ನ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳನ್ನೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಬಹುದು ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಅಪರಾಧ ನಡೆದಾಗ ಆರೋಪಿತರು ಜನಪ್ರತಿನಿಧಿಯಾಗಿದ್ದರೇ ಅಥವಾ ನಂತರ ಆ ಸ್ಥಾನಕ್ಕೆ ಆಯ್ಕೆಯಾದರೇ ಎಂಬುದು ವಿಶೇಷ ನ್ಯಾಯಾಲಯದ ವಿಚಾರಣಾಧಿಕಾರ ನಿರ್ಧರಿಸುವಲ್ಲಿ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಾಜಿ ವಿಧಾನಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌  ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಚಿಕ್ಕನಾಯಕನಹಳ್ಳಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದಿದ್ದ ಪ್ರಕ್ರಿಯೆ ರದ್ದುಪಡಿಸಿದೆ. ಜತೆಗೆ, ಪ್ರಕರಣವನ್ನು ರಾಜ್ಯದಲ್ಲಿ ಮ್ಯಾಜಿಸ್ಪ್ರೇಟ್‌ ವಿಚಾರಣೆಗೆ ಒಳಪಡುವ ಹಾಲಿ ಹಾಗೂ ಮಾಜಿ ಸಂಸದರು-ಶಾಸಕರ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor