ಬೆಂಗಳೂರು : ಪೌರಾಡಳಿತ ನಿರ್ದೇಶನಾಲಯದ ಕಲ್ಯಾಣ ಕರ್ನಾಟಕ ವೃಂದಕ್ಕೆ ಸೇರಿದ ನೀರು ಸರಬರಾಜು ಆಪರೇಟರ್ ಹಾಗೂ ಸಹಾಯಕ ನೀರು ಸರಬರಾಜು ಆಪರೇಟರ್, ಇಎಸ್‍ಐ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನರ್ಸಿಂಗ್‌ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಕೆಇಎ ನಡೆಸಿದ ಪರೀಕ್ಷೆಯಲ್ಲಿ ಶೇ.68ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ.

ನೀರು ಸರಬರಾಜು ಆಪರೇಟರ್ ಹಾಗೂ ಸಹಾಯಕ ನೀರು ಸರಬರಾಜು ಆಪರೇಟರ್ ಹುದ್ದೆಗಳಿಗೆ ಬೆಳಗ್ಗೆ ನಿರ್ದಿಷ್ಟ ಪತ್ರಿಕೆಗೆ ಪರೀಕ್ಷೆ ನಡೆಯಿತು. ಇದರಲ್ಲಿ ಅರ್ಜಿ ಸಲ್ಲಿಸಿದ್ದ 2,552 ಅಭ್ಯರ್ಥಿಗಳ ಪೈಕಿ 1,481 ಮಂದಿ (ಶೇ.83) ಹಾಜರಾಗಿದ್ದರು.

ಮಧ್ಯಾಹ್ನದ ನಂತರದ ಎಲ್ಲ ಇಲಾಖೆಗಳ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಪತ್ರಿಕೆ ಪರೀಕ್ಷೆ ನಡೆಯಿತು. ಅದರಲ್ಲಿ 13,044 ಅಭ್ಯರ್ಥಿಗಳ ಪೈಕಿ 7,089 (ಶೇ.68) ಮಂದಿ ಹಾಜರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor