ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಎಚ್.ಎಸ್. ಮಂಜುನಾಥ್ ನೇಮಕ
Update: 2025-02-20 12:06 IST
ಬೆಂಗಳೂರು, ಫೆ.20: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅತ್ಯಂತ ಹೆಚ್ವು ಮತಗಳನ್ನು ಗಳಿಸಿದ್ದ ಎಚ್.ಎಸ್.ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಅಧಿಕೃತ ಘೋಷಣೆ ಮಾಡಲಾಗಿದೆ.
ಅಧ್ಯಕ್ಷರ ಅಯ್ಕೆ ಸಂಬಂಧ ಅತ್ಯಧಿಕ ಮತಗಳನ್ನು ಗಳಿಸಿರುವ ಎಚ್.ಎಸ್. ಮಂಜುನಾಥ್, ದೀಪಿಕಾ ರೆಡ್ಡಿ, ಅಬ್ದುಲ್ ದೇಸಾಯಿಯವರನ್ನು ಹೊಸದಿಲ್ಲಿಯಲ್ಲಿರುವ ಯುವ ಕಾಂಗ್ರೆಸ್ ಕಚೇರಿಗೆ ಆಹ್ವಾನಿಸಿ ಸಂದರ್ಶನ ನಡೆಸಲಾಗಿತ್ತು
ಯುವ ಕಾಂಗ್ರೆಸ್ ರಾಷ್ಟ್ರೀಯಾಧ್ಯಕ್ಷ ಉದಯ್ ಬಾನು ಚಿಬ್ಬು ನೇತೃತ್ವದಲ್ಲಿ ಸಭೆ ನಡೆಸಿ ಅಧಿಕೃತ ಘೋಷಣೆ ಮಾಡಲಾಗಿದೆ.