×
Ad

ಕೆಪಿಸಿಸಿ ನೂತನ ತಂಡ ರಚನೆ: 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿ ನೇಮಕ

Update: 2024-04-02 00:15 IST

Photo: X/@XpressBengaluru

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಒಟ್ಟು 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.

ವಿ.ಎಸ್. ಉಗ್ರಪ್ಪ, ಆನಂದ ನ್ಯಾಮೇಗೌಡ, ಎಂ. ನಾರಾಯಣಸ್ವಾಮಿ, ಆರ್‌.ವಿ. ವೆಂಕಟೇಶ್, ಎಂ.ಸಿ. ವೆಂಕಟೇಶ್, ಬಿ.ಎಲ್‌. ಶಂಕರ್‌, ಅಜಯಕುಮಾರ್‌ ಸರನಾಯಕ, ಅಕ್ಕೈ ಪದ್ಮಾಸಾಲಿ, ಎಚ್‌. ಆಂಜನೇಯ, ರಮಾನಾಥ ರೈ, ಮೋಹನ್ ಲಿಂಬೆಕಾಯಿ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.

ಪ್ರಧಾನ ಕಾರ್ಯದರ್ಶಿ ಪಟ್ಟಿಯಲ್ಲಿ ವೀಣಾ ಕಾಶಪ್ಪನವರ್, ಪೂರ್ಣಿಮಾ ಶ್ರೀನಿವಾಸ್, ವಿಜಯ ಮುಳುಗುಂದ್‌, ವಿ. ಶಂಕರ್, ಎಚ್‌. ನಾಗೇಶ್, ಶಂಕರ್‌ ಗುಹಾ, ನಟಿ ಭಾವನಾ, ಮದನ್‌ ಪಟೇಲ್, ರಕ್ಷಿತ್ ಶಿವರಾಮ್, ಮಿಥುನ್‌ ರೈ, ಸೌಮ್ಯಾ ರೆಡ್ಡಿ, ಬಸವನಗೌಡ ಬಾದರ್ಲಿ ಮುಂತಾದವರ ಹೆಸರು ಇದೆ.

ವಿನಯ್‌ ಕಾರ್ತಿಕ್‌ ಅವರನ್ನು ಖಜಾಂಚಿ, ಮಾಧ್ಯಮ ವಿಭಾಗಕ್ಕೆ ರಮೇಶ್‌ ಬಾಬು, ಸಹ ಅಧ್ಯಕ್ಷರಾಗಿ ಐಶ್ವರ್ಯಾ ಮಹದೇವ್‌, ಉಪಾಧ್ಯಕ್ಷರಾಗಿ ಇ. ಸತ್ಯಪ್ರಕಾಶ್ ಅವರನ್ನು ನೇಮಿಸಲಾಗಿದೆ. ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಸಹ ಅಧ್ಯಕ್ಷರಾಗಿ ವಿಜಯ್‌ ಮತ್ತಿಕಟ್ಟಿ, ನಿಕೇತ್‌ ರಾಜ್ ಮೌರ್ಯ ಅವರನ್ನು ಎಐಸಿಸಿ ನೇಮಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News