ಲೋಕಸಭಾ ಚುನಾವಣೆ: ಮಧ್ಯಾಹ್ನದ ವೇಳೆ ರಾಜ್ಯದಲ್ಲಿ 38.23 ಶೇ. ಮತದಾನ

Update: 2024-04-26 09:24 GMT

ಬೆಂಗಳೂರು, ಎ.26: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆ 38.23 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 46.43 ಶೇ. ಮತದಾನವಾಗಿದ್ದರೆ, ಹಾಸನ 40.99 ಶೇ., ದಕ್ಷಿಣ ಕನ್ನಡ 48.10 ಶೇ., ಚಿತ್ರದುರ್ಗ- 39.05 ಶೇ., ತುಮಕೂರು 41.91 ಶೇ., ಮಂಡ್ಯ 40.70 ಶೇ., ಮೈಸೂರು 41.58, ಚಾಮರಾಜನಗರ- 39.57 ಶೇ., ಬೆಂಗಳೂರು ಗ್ರಾಮಾಂತರ-39.09 ಶೇ., ಬೆಂಗಳೂರು ಉತ್ತರ-32.25, ಬೆಂಗಳೂರು ಸೆಂಟ್ರಲ್-30.10 ಶೇ., ಬೆಂಗಳೂರು ದಕ್ಷಿಣ-31.51 ಶೇ., ಚಿಕ್ಕಬಳ್ಳಾಪುರ 39.85 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 38.42 ಶೇ. ಮತದಾನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News