×
Ad

‘ಗೃಹಜ್ಯೋತಿ ಡಿ-ಲಿಂಕ್’ ಸೌಲಭ್ಯʼ: ಮನೆ ಬದಲಾಯಿಸುವವರಿಗೆ ಅನುಕೂಲ

Update: 2024-02-08 22:03 IST

ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ನಿಯಾಮಾವಳಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುವ ಯೋಜನೆ ಫಲಾನುಭವಿಗಳಿಗೆ ‘ಡಿ-ಲಿಂಕ್’ ಅವಕಾಶವನ್ನು ಇಂಧನ ಇಲಾಖೆ ಕಲ್ಪಿಸಿದೆ.

ಗುರುವಾರ ಈ ಸಂಬಂಧ ಇಂಧನ ಇಲಾಖೆ ಆದೇಶ ಹೊರಡಿಸಿದ್ದು, ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಬಾಡಿಗೆ ಮನೆ ಬದಲಾವಣೆ ಮಾಡಿದರೆ ಹಳೆಯ ಮನೆಯ ವಿಳಾಸ ಬದಲಾವಣೆ ಮಾಡಿ ವಿದ್ಯುತ್ ಸಂಪರ್ಕ ರದ್ದುಪಡಿಸಿ, ಹೊಸ ಮನೆ ವಿಳಾಸಕ್ಕೆ ಗೃಹಜ್ಯೋತಿ ಯೋಜನೆಯ ಫಲ ಪಡೆಯಹುದಾಗಿದೆ.

ಯೋಜನೆಯಡಿ 200 ಯುನಿಟ್‍ವರೆಗೆ ಗೃಹ ಬಳಕೆ ವಿದ್ಯುತ್ತನ್ನು ಉಚಿತವಾಗಿ ಪೂರೈಸಲಾಗುತ್ತಿದೆ. ಮಾನದಂಡಗಳ ಪ್ರಕಾರ, ಫಲಾನುಭವಿಗಳು ಅರ್ಹರಿರುವಷ್ಟು ಯುನಿಟ್‍ಗೆ ಶೂನ್ಯ ಬಿಲ್ ನೀಡಲಾಗುತ್ತಿದೆ. ಇದಕ್ಕೆ ಆಧಾರ್ ಲಿಂಕ್ ಮಾಡಿ ನೋಂದಾಯಿಸಬೇಕು. ಒಂದು ವೇಳೆ ಮನೆ ಖಾಲಿ ಮಾಡಿದರೆ ಹಳೆಯ ಮನೆಯ ಆರ್.ಆರ್.ನಂಬರ್ ಗೆ ನೋಂದಾಯಿಸಿದ್ದ ಆಧಾರ್ ಕಾರ್ಡ್ ಡಿ-ಲಿಂಕ್ ಮಾಡಲು ಸಾಧ್ಯವಿರಲಿಲ್ಲ.

ಹೀಗಾಗಿ ಫಲಾನುಭವಿಗಳು ತಮ್ಮ ಮನೆ ಬದಲಿಸುವ ಸಂದರ್ಭದಲ್ಲಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಳದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಳದಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು ಡಿ-ಲಿಂಕಿಂಗ್ ಸೌಲಭ್ಯ ಕಲ್ಪಿಸಿ ಎಂದು ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News