×
Ad

ವಾಣಿಜ್ಯ ಸಂಸ್ಥೆಗಳ ಮಾಲಕರು ಇ-ಕಾರ್ಮಿಕ ತಂತ್ರಾಂಶದಲ್ಲಿ ನೋಂದಣಿ ಮಾಡಿಸಲು ಸೂಚನೆ

Update: 2025-02-12 22:26 IST

ಬೆಂಗಳೂರು : ರಾಜ್ಯದ ಎಲ್ಲ ಸ್ಥಳಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲಕರು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಡಿ ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಇ-ಕಾರ್ಮಿಕ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಲು ಕಾರ್ಮಿಕ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ನೋಂದಣಿ ಮಾಡಲು ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ನೌಕರರು ಇಲ್ಲದಿದ್ದರೆ ಶುಲ್ಕ 405 ರೂ., 1 ರಿಂದ 9 ನೌಕರರಿದ್ದರೆ 810 ರೂ., 10 ರಿಂದ 19 ನೌಕರರಿದ್ದರೆ 5400 ರೂ., 20 ರಿಂದ 49 ನೌಕರರಿದ್ದರೆ 13,500 ರೂ., 50 ರಿಂದ 99 ನೌಕರರಿದ್ದರೆ 27ಸಾವಿರ ರೂ., 100 ರಿಂದ 250 ನೌಕರರಿದ್ದರೆ 54 ಸಾವಿರ ರೂ., 251 ರಿಂದ 500 ನೌಕರರಿದ್ದರೆ 67,500 ರೂ., 501 ರಿಂದ 1,000 ನೌಕರರಿದ್ದರೆ 94,500 ರೂ. 1,000 ಸಾವಿರಕ್ಕಿಂತ ಅಧಿಕ ನೌಕರರು ಕಾರ್ಯನಿರ್ವಹಿಸುತ್ತಿದ್ದರೆ ರೂ.1,01,250 ರೂ.ಗಳನ್ನು ಪಾವತಿಸಬೇಕು.

ಆನ್‍ಲೈನ್‍ನಲ್ಲಿ ಅರ್ಜಿಯನ್ನು ಜಾಲತಾಣ https://www.ekarmika.karnataka.gov.in/ekarmika/Static/Home.aspx ಮೂಲಕ ಸಲ್ಲಿಸಬಹುದು. ಇಲಾಖೆಯ ಹಿರಿಯ ಕಾಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರು ನೋಂದಣಿ ಅಧಿಕಾರಿಗಳಾಗಿರುತ್ತಾರೆ. ಸಹಾಯವಾಣಿ ಸಂಖ್ಯೆ 155214 ಹಾಗೂ ಇ-ಮೇಲ್ ವಿಳಾಸ: ekarmikalabour@gmail.com ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News