ಬೆಂಗಳೂರು | ಲಂಚಕ್ಕೆ ಪೊಲೀಸರಿಂದಲೇ ಫೋನ್ ಪೇ, ಗೂಗಲ್ ಪೇ ಬಳಕೆ : ದೂರು
Update: 2025-02-27 16:57 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಂದ ನಗರ ಸಂಚಾರ ಪೊಲೀಸರು ಫೋನ್ ಪೇ, ಗೂಗಲ್ ಪೇ ಮೂಲಕ ಲಂಚ ಕೇಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆ.21ರಂದು ವಾಹನ ಸವಾರರೊಬ್ಬರು ವರ್ತೂರು ಕರೆ ಬಳಿ ಏಕಮುಖ ರಸ್ತೆಯಲ್ಲಿ ಬಂದಿದ್ದು, ಇದನ್ನು ಗಮನಿಸಿದ ಕಾನ್‌ಸ್ಟೇಬಲ್ ಮಂಜುನಾಥ್ ಎಂಬವರು ವಾಹನವನ್ನು ಅಡ್ಡ ಹಾಕಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ವಾಹನ ಸವಾರ 1,500 ರೂ.ದಂಡ ಪಾವತಿಸಲು ಸಿದ್ದರಾಗಿದ್ದರೂ, 500 ರೂಪಾಯಿ ಫೋನ್ ಪೇ ಮಾಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆಂದು ವಾಹನ ಸವಾರ ರಾಚಮಲ್ಲ ಎಂಬವರು ಎಸಿಪಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.
ದೂರು ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಸಂಚಾರ ಠಾಣೆ ಇನ್ ಸ್ಪೆಕ್ಟರ್‌ಗೆ ಸೂಚನೆ ನೀಡಿದ್ದಾರೆ.