×
Ad

ಬುದ್ಧ ಜಯಂತಿಗೆ ಕಾರಾಗೃಹ ಬಂಧಿಗಳಿಗೆ ಸಿಹಿ ವಿತರಿಸಲು ಸಿಎಂ ಸೂಚನೆ

Update: 2025-05-10 22:08 IST

ಬೆಂಗಳೂರು : ಪ್ರತಿವರ್ಷ ಎ.14ರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಮೇ 12ರ ಬುದ್ಧ ಜಯಂತಿಯಂದು ಕಾರಾಗೃಹ ಬಂಧಿಗಳಿಗೆ ಸಿಹಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಗೆ ರಾಜ್ಯ ಸರಕಾರ ಸೂಚನೆ ನೀಡಿದೆ.

ಕೆಲವು ವಿಶೇಷ/ಪ್ರಮುಖ ದಿನಗಳಂದು ಕಾರಾಗೃಹಗಳಲ್ಲಿರುವ ಬಂಧಿಗಳಿಗೆ ಸಿಹಿ ವಿತರಿಸಲಾಗುತ್ತಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಹಾಗೂ ಬುದ್ಧ ಜಯಂತಿಯಂದು ಕಾರಾಗೃಹಗಳಲ್ಲಿರುವ ಬಂಧಿಗಳಿಗೆ ಸಿಹಿ ವಿತರಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಎಂಬುವರು ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂ ಜಯಂತಿ ದಿನ ಬಂಧಿಗಳಿಗೆ ಸಿಹಿ ವಿತರಿಸುವಂತೆ ಗೃಹ ಸಚಿವ ಡಾ.ಪರಮೇಶ್ವರ್ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News