×
Ad

ಓಜೋನ್ ಅರ್ಬನಾ ಇನ್‍ಫ್ರಾ ಡೆವಲಪರ್ಸ್ ಕಂಪೆನಿ ಮೇಲೆ ಈ.ಡಿ. ದಾಳಿ

Update: 2025-08-03 19:53 IST

ಸಾಂದರ್ಭಿಕ ಚಿತ್ರ | PTI

ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಓಜೋನ್ ಅರ್ಬನಾ ಇನ್‍ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹಾಗೂ ಅದರ ಪ್ರಚಾರಕರಾದ ಸತ್ಯಮೂರ್ತಿ, ವಾಸುದೇವನ್ ಅವರಿಗೆ ಸೇರಿದ 10 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(ಈ.ಡಿ.) ಶೋಧ ಕಾರ್ಯಾಚರಣೆ ನಡೆಸಿದೆ.

ಆ.1ರಂದು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿಯಲ್ಲಿ ಬೆಂಗಳೂರು, ಮುಂಬೈನ ವಿವಿಧೆಡೆ ಒಟ್ಟು 10 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಯೋಜನೆ ಹೆಸರಿನಲ್ಲಿ ಸಾರ್ವಜನಿಕರ ಹಣ ದುರ್ಬಳಕೆ ಮಾಡಿರುವುದರ ಕುರಿತ ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈ.ಡಿ. ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಬೆಂಗಳೂರು ಮೂಲದ ಓಜೋನ್ ಅರ್ಬನಾ ಇನ್‍ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ದೇವನಹಳ್ಳಿ ಬಳಿ ನಿರ್ಮಾಣವಾಗಲಿರುವ ಯೋಜನೆಯಲ್ಲಿ ಮನೆಗಳನ್ನು ನೀಡುವುದಾಗಿ ನೂರಾರು ಜನರಿಂದ ಹಣ ಪಡೆದಿತ್ತು. ಆದರೆ ಯಾವುದೇ ಮನೆಗಳನ್ನೂ ನೀಡದಿದ್ದಾಗ ಹೂಡಿಕೆದಾರರು ವಿವಿಧೆಡೆ ದೂರು ದಾಖಲಿಸಿದ್ದರು. ಬಳಿಕ ಜಾರಿ ನಿರ್ದೇಶನಾಲಯವೂ ಸಹ ತನಿಖೆ ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News