ಬೆಂಗಳೂರು: ಪೆನ್ ಪಾಯಿಂಟ್ ವತಿಯಿಂದ ʼಇಫ್ತಾರ್ ಮೀಟ್ʼ
Update: 2025-03-20 17:03 IST
ಬೆಂಗಳೂರು: ʼಪೆನ್‌ಪಾಯಿಂಟ್ʼ ಸ್ನೇಹ ವೇದಿಕೆಯ ವತಿಯಿಂದ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ʼಇಫ್ತಾರ್ ಮೀಟ್ʼ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಇಮ್ರಾನ್ ರೆಂಜಲಾಡಿ, ಸ್ವಾಲೀಹ್ ತೋಡಾರ್, ಸಿನಾನ್ ಇಂದಬೆಟ್ಟು, ವಕೀಲ ಬದ್ರುದ್ದೀನ್, ಅಸಪ ಗೇರುಕಟ್ಟೆ, ಶರೀಫ್ ಕೊಯಿಲ, ಅಬ್ದುಲ್ ಗಫ್ಫಾರ್ ಕೆಮ್ಮಾರ, ಉಮ್ಮರ್ ಕುಂಞಿ ಸಾಲೆತ್ತೂರು, ವಕೀಲ ಅಶ್ರಫ್, ಯಂಶ ಬೇಂಗಿಲ, ರಫೀಕ್ ಪೂಡಲ್, ಇರ್ಷಾದ್ ಬೊಳ್ಳಾಯಿ ಸಹಿತ ಮತ್ತಿತರರು ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಶಂಸು ಗಾಂಜಾಲ್ ಹಾಗೂ ಇಸಾಕ್ ಸಜೀಪ ಕಾರ್ಯಕ್ರಮ ನಿರ್ವಹಿಸಿದರು. ತಾಜು ಪುತ್ತೂರು ವಂದಿಸಿದರು.
ಬೆಂಗಳೂರಿನಲ್ಲಿರುವ ಪೆನ್ ಪಾಯಿಂಟ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾದರು.