ಮೂವರು ಐಪಿಎಸ್ ಅಧಿಕಾರಿಗಳ ಮುಂಭಡ್ತಿ ಆದೇಶ ಪರಿಷ್ಕರಿಸಿದ ರಾಜ್ಯ ಸರಕಾರ
Update: 2026-01-02 23:20 IST
ಬೆಂಗಳೂರು, ಜ.2: ರಾಜ್ಯ ಸರಕಾರವು ಡಿ.31ರಂದು ಮೂವರು ಐಪಿಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿ ಹೊರಡಿಸಿದ್ದ ಆದೇಶವನ್ನು ಪರಿಷ್ಕರಣೆ ಮಾಡಿದೆ.
ಲೋಕಾಯುಕ್ತ ಡಿಐಜಿಪಿ ಡಿ.ಆರ್.ಸಿರಿ ಗೌರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಪಿಸಿಎಲ್ ಡಿಐಜಿಪಿ ಪದನ್ನೋತಿ ನೀಡಲಾಗಿದೆ. ಡಿಐಜಿಪಿ ಡಾ.ಎಂ.ಅಶ್ವಿನಿ ಅವರನ್ನು ಜಲಸಂಪನ್ಮೂಲ ಇಲಾಖೆಯ ವಿಚಕ್ಷಣ ವಿಭಾಗದ ಡಿಐಜಿಪಿಯನ್ನಾಗಿ ಪದವಿ ಇಳಿಕೆ ಮಾಡಲಾಗಿದೆ.
ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ದೆಕ್ಕಾ ಕಿಶೋರ್ ಬಾಬು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಖಾಲಿ ಹುದ್ದೆಗೆ ವರ್ಗಾವಣೆ ಮಾಡಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.