×
Ad

ರಾಜ್ಯದಲ್ಲಿ 64 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪಲ್ಸ್ ಪೋಲಿಯೋ ವಿತರಣೆ

Update: 2025-12-26 22:58 IST

ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ರಾಜ್ಯದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು, ರಾಜ್ಯಾದ್ಯಂತ 64,25,399 ಅರ್ಹ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಗಳನ್ನು ಹಾಕಲಾಗಿದೆ. ರಾಜ್ಯ ಸರಕಾರವು ರಾಜ್ಯದಲ್ಲಿ 62,40,114 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡುವ ಗುರಿ ಇಟ್ಟುಕೊಂಡಿತ್ತು. ಈ ಮೂಲಕ ಶೇ.103ರಷ್ಟು ಗುರಿ ಸಾಧಿಸಲಾಗಿದೆ.

ಶುಕ್ರವಾರದಂದು ಆರೋಗ್ಯ ಇಲಾಖೆಯು ಅಂಕಿ-ಅಂಶಗಳನ್ನು ಪ್ರಕಟಿಸಿದ್ದು, ಬಾಗಲಕೋಟೆ 2,25,795 ಬಳ್ಳಾರಿ 2,00,968 ಗ್ರೇಟರ್ ಬೆಂಗಳೂರು ಪ್ರಾಧಿಕಾರ 11,65,169 ಬೆಳಗಾವಿ 5,02,921, ಬೆಂಗಳೂರು ಗ್ರಾಮಾಂತರ 1,11,469 ಬೆಂಗಳೂರು ನಗರ ಜಿಲ್ಲೆಯಲ್ಲಿ 2,12,669 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಬೀದರ್ 2,13,213 ಚಾಮರಾಜನಗರ 60,221, ಚಿಕ್ಕಬಳ್ಳಾಪುರ 1,05,980, ಚಿಕ್ಕಮಗಳೂರು 76,034, ಚಿತ್ರದುರ್ಗ 1,33,567 ದಕ್ಷಿಣ ಕನ್ನಡ 1,46,605 ದಾವಣಗೆರೆ 1,40,756 ಧಾರವಾಡ ಜಿಲ್ಲೆಯಲ್ಲಿ 2,09,564 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ.

ಗದಗ 1,16,284, ಹಾಸನ 1,11,205, ಹಾವೇರಿ 1,50,842, ಕಲಬುರಗಿ 3,55,011, ಕೊಡಗು 39,601, ಕೋಲಾರ 1,66,380, ಕೊಪ್ಪಳ 1,84,628, ಮಂಡ್ಯ 1,06,100, ಮೈಸೂರು 2,33,484, ರಾಯಚೂರು 2,60,053, ರಾಮನಗರ ಜಿಲ್ಲೆಯಲ್ಲಿ 78,376 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ.

ಶಿವಮೊಗ್ಗ 1,39,919, ತುಮಕೂರು 1,94,888, ಉಡುಪಿ 65,343, ಉತ್ತರ ಕನ್ನಡ 98,135, ವಿಜಯಪುರ 2,99,564 ವಿಜಯನಗರ 1,34,895 ಯಾದಗಿರಿ ಜಿಲ್ಲೆಯಲ್ಲಿ 1,67,647 ಮಕ್ಕಳಿಗೆ ಪಲ್ಸ್ ಪೋಲಿಯೋ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News