ಯುದ್ಧದ ಉನ್ಮಾದದಲ್ಲಿದ್ದ ಅನುಯಾಯಿಗಳಿಗೆ ಶಾಕ್ ಕೊಟ್ಟ ಮೋದಿ : ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ದೇಶ ವ್ಯಾಪಿ ಜಾತಿಗಣತಿ ನಡೆಸಲು ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿದ್ದು, ಈ ಮೂಲಕ ಯುದ್ಧವೆಂದು ಬೊಬ್ಬಿರಿಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಅನುಯಾಯಿಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಜಾತಿ ಗಣತಿ ನಡೆಸುವ ಕೇಂದ್ರ ಸರಕಾರದ ನಿರ್ಧಾರ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ಮೋದಿ ತಮ್ಮ ಅನುಯಾಯಿಗಳಿಗೆ ಈ ರೀತಿಯ ಶಾಕ್ ಟ್ರೀಟ್ಮೆಂಟ್ ಕೊಡುತ್ತಲೇ ಇರುತ್ತಾರೆ. ಅನುಯಾಯಿಗಳೆಲ್ಲ ಯುದ್ಧ ಯುದ್ಧ ವೆಂದು ಬೊಬ್ಬಿರಿಯುತ್ತಿರುವಾಗ ಪ್ರಧಾನಿ ಯುದ್ಧದ ಬಗ್ಗೆ ಮಾತಾಡಲೇ ಇಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸೀದಾ ಚುನಾವಣಾ ಪ್ರಚಾರಕ್ಕೆ ಹೋಗಿ ‘ಉಗ್ರರನ್ನು ಶಿಕ್ಷಿಸುತ್ತೇವೆ’ ಎಂದು ಹೇಳಿದರು. ಇನ್ನೊಂದೆಡೆ, ಜಾತಿ ಜನಗಣತಿ ಯಾಕೆ ಬೇಡ? ಎಂದು ಅನುಯಾಯಿಗಳು ಚರ್ಚೆ ನಡೆಸುತ್ತಿರುವಾಗ ಪ್ರಧಾನಿಗಳು ನಾವು ಜನಗಣತಿ ಮಾಡುತ್ತೇವೆ ಎಂದು ಬಿಟ್ಟರು. ಗ್ಯಾರಂಟಿಗಳ ವಿಷಯದಲ್ಲೂ ಹೀಗೆಯೇ ಆಯಿತು. ದಿಲ್ಲಿ ಚುನಾವಣೆಯಲ್ಲಿ ಭಾರೀ ಕೊಡುಗೆಗಳನ್ನು ಘೋಷಿಸಲಾಯಿತು. ಹೀಗೆ ನಂಬಿ ಕೆಟ್ಟವರ ಸಂಖ್ಯೆ ದೊಡ್ಡದಿದೆ ಎಂದು ಪ್ರೊ.ಪುರುಷೋತ್ತಮ ಬಿಳಿಮಲೆ ಟೀಕಿಸಿದ್ದಾರೆ.