ರೇಣುಕಾಸ್ವಾಮಿ ಕೊಲೆ ಪ್ರಕರಣ : ಇಂದು ದರ್ಶನ್ ಖುದ್ದು ಹಾಜರಾತಿ ಅರ್ಜಿ ವಿಚಾರಣೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ನ್ಯಾಯಾಲಯದ ವಿಚಾರಣೆ ವೇಳೆ ಖುದ್ದು ಹಾಜರಾತಿ ಕೋರಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರಿರುವ ಏಕಸದಸ್ಯ ಪೀಠ ಇಂದು ಮಧ್ಯಾಹ್ನ 2:30 ಕ್ಕೆ ನಡೆಸಲಿದೆ.
ನ್ಯಾಯಾಲಯದ ವಿಚಾರಣೆಯಲ್ಲಿ ಪ್ರಮುಖ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಶನ್ ನಡೆಯುವಾಗ ಖುದ್ದು ಹಾಜರಾತಿ ಕೋರಿ ಟ್ರಯಲ್ ಕೋರ್ಟ್ ಗೆ ಈ ಮೊದಲು ದರ್ಶನ್ ಅರ್ಜಿ ಸಲ್ಲಿಸಿದ್ದರು. ಆದರೆ ಟ್ರಯಲ್ ಕೋರ್ಟ್ ಇದಕ್ಕೆ ಅನುಮತಿಯನ್ನ ನಿರಾಕರಿಸಿತ್ತು. ಇದನ್ನ ಪ್ರಶ್ನೆ ಮಾಡಿ ದರ್ಶನ್ ಪರ ವಕೀಲರು ಹೈಕೋರ್ಟ್ ನಲ್ಲಿ ರಿಟ್ ಸರ್ಜಿ ಸಲ್ಲಿಕೆ ಮಾಡಿದ್ದಾರೆ.
ಈಗಾಗಲೇ ಎರಡು ಬಾರಿ ಹೈಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆದಿದೆ. ಪ್ರಮುಖ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಶನ್ ಸಂಬಂಧ ಮಾಹಿತಿಯನ್ನು ಈಗಾಲೇ ನ್ಯಾಯಾಲಯಕ್ಕೂ ಸಲ್ಲಿಕೆ ಮಾಡಲಾಗಿದ್ದು, ಬಹುತೇಕ ಇಂದು ನ್ಯಾಯಪೀಠದಿಂದ ಅದೇಶ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.