×
Ad

ಬೆಂಗಳೂರು: ಹಿಂದಿ ಮಾತನಾಡುವಂತೆ ಆಟೋ ಚಾಲಕನಿಗೆ ಧಮ್ಕಿ!

Update: 2025-04-19 20:55 IST

Screengrab: X/@Vinayreddy71

ಬೆಂಗಳೂರು: ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡು ಎಂದು ಹಿಂದಿ ಭಾಷಿಗನೊಬ್ಬ ಧಮ್ಕಿ ಹಾಕಿರುವ ಘಟನೆ ನಗರದ ಎಸ್‍ಎಂಎಸ್ ಆರ್ಕೇಡ್ ರಸ್ತೆಯಲ್ಲಿ ವರದಿಯಾಗಿದೆ.

ಹಿಂದಿಯಲ್ಲಿ ಮಾತನಾಡು ಎಂದು ಹಿಂದಿ ಯುವಕನೊಬ್ಬ ಧಮ್ಮಿ ಹಾಕಿದ್ದಕ್ಕೆ ಆಟೋ ಚಾಲಕ, ‘ಏನೂ ಮಾಡಕ್ಕಾಗಲ್ಲ. ಕನ್ನಡ ಮಾತನಾಡುವುದನ್ನು ಕಲಿಯಿರಿ. ನೀನಿಲ್ಲಿ ಬೆಂಗಳೂರಿಗೆ ಬಂದಿರುವುದು’ ಎಂದು ತಿರುಗೇಟು ಕೊಟ್ಟಿದ್ದಾನೆ. ಈ ವೇಳೆ ಹಿಂದಿ ಯುವಕನ ಜತೆಗಿದ್ದ ಯುವತಿ ಆತನನ್ನು ಕರೆದೊಯ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯಿಸಿದ್ದು, ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಹೀಗಾಗಿ ಎಲ್ಲರೂ ಹಿಂದಿ ಮಾತನಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಬೆಂಗಳೂರಿನ ಹೆಚ್ಚಿನ ಕನ್ನಡಿಗರಿಗೆ ಹಿಂದಿ ತಿಳಿದಿದೆ. ಆದರೆ, ಕನ್ನಡ ಕಲಿಯಲು ವಲಸಿಗರು ಏಕೆ ಹಿಂಜರಿಯುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News