×
Ad

SSF ರಾಜ್ಯ ಸಮಿತಿ ವತಿಯಿಂದ ಸೌಹಾರ್ದ ನಡಿಗೆ ಕಾರ್ಯಕ್ರಮ: ಸಮಾರೋಪದಲ್ಲಿ ಭಾಗವಹಿಸಿದ ಸ್ಪೀಕರ್ ಯು.ಟಿ.ಖಾದರ್

Update: 2025-07-04 17:14 IST

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕೋಮುವಾದಕ್ಕೆ ಕಡಿವಾಣ ಹಾಕಲು SSF ಕರ್ನಾಟಕವು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಮನಸ್ಸು ಮನಸ್ಸುಗಳನ್ನು ಪೋಣಿಸುವ’ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿರುವ ‘ಸೌಹಾರ್ದ ನಡಿಗೆ’ಯ ಸಮಾರೋಪದಲ್ಲಿ ಸ್ಪೀಕರ್‌ ಯು.ಟಿ.ಖಾದರ್ ಅವರು ಭಾಗವಹಿಸಿದರು.

ರಾಜ್ಯದ 20 ಪಟ್ಟಣಗಳಲ್ಲಿ ನಡೆದ ಸೌಹಾರ್ದ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಧಮ್ಮವೀರ ಭಂತೆ, ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಪ್ರಾಂಶುಪಾಲ, ಧರ್ಮಗುರು ಸಿರಿಲ್ ಮೆನೆಜಸ್ ಎಸ್.ಜೆ, ರಾಜ್ಯ ಯುವಜನ ಸಂಘದ ಅಧ್ಯಕ್ಷ ಬಶೀರ್ ಸ‌ಅ‌ದಿ ಪೀಣ್ಯ, SSF ರಾಜ್ಯಧ್ಯಕ್ಷ ಸುಫಿಯಾನ್ ಸಖಾಫಿ, ಎಸ್.ವೈ.ಎಸ್, ರಾಜ್ಯ ಸಾಂತ್ವನ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪಯೋಟ, ಸ್ವಾಗತ ಸಮಿತಿಯ ಚೇರ್ಮಾನ್ ಸ್ವಾಲಿಹ್ ಟಿ.ಸಿ. ಮುಂತಾದವರು ಭಾಗವಹಿಸಿದ್ದರು.















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News