ಬೆಂಗಳೂರು | ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಮಹಿಳಾ ದಿನಾಚರಣೆ
Update: 2025-03-09 18:29 IST
ಬೆಂಗಳೂರು : ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ ಶನಿವಾರ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾರಿ ಶಕ್ತಿ ಪ್ರಶಸ್ತಿ-2025 ಅನ್ನು ಪ್ರದಾನ ಮಾಡಲಾಯಿತು.
ಗೋವಿಂದಪುರ ಸಬ್ ಇನ್ಸ್‌ಪೆಕ್ಟರ್ ಸಾವಿತ್ರಿ ಜೆ.ಕೆ., ಮಮತಾ ಪ್ರೌಢಶಾಲೆಯ ಡೋರಿಸ್ ರೇಖಾ, ಬಾಲಕ್ ಉರ್ದು ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ನಗೀನಾ ಬೇಗಮ್, ಸ್ಟಾಲ್‌ವಾರ್ಟ್ಸ್ ಶಾಲೆಯ ಶಿಕ್ಷಕಿ ಫಾಸಿಹಾ ಅಂಜುಮ್ ಅವರಿಗೆ ನಾರಿ ಶಕ್ತಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕ ಅಬ್ದುಲ್ ರಹೀಮ್, ಫ್ಲೋರ್ ವ್ಯವಸ್ಥಾಪಕಿ ಸಲ್ಮಾ ಹಬೀಬ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.