×
Ad

ನಾಳೆ(ಫೆ.29) ಬಿಬಿಎಂಪಿ ಬಜೆಟ್ ಮಂಡನೆ

Update: 2024-02-28 21:21 IST

ಬೆಂಗಳೂರು: ನಗರದ ಪುರಭವನದಲ್ಲಿ ನಾಳೆ(ಫೆ.29) ಬೆಳಗ್ಗೆ 10.30ಕ್ಕೆ ಬಿಬಿಎಂಪಿ ಬಜೆಟ್ ಪ್ರಕಟವಾಗಲಿದ್ದು, ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಬಜೆಟ್ ಮಂಡಿಸಿಲಿದ್ದಾರೆ.

ಬಿಬಿಎಂಪಿಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಸತತ ನಾಳ್ಕನೇ ಬಾರಿಯೂ ಅಧಿಕಾರಿಗಳೇ ಮಂಡಿಸಲಿದ್ದಾರೆ. ಹಿಂದಿನ ಮೂರು ಬಾರಿಯೂ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತರು ಬಜೆಟ್ ಮಂಡಿಸಲಿದ್ದಾರೆ. ನಗರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಬಜೆಟ್ ಮಂಡನೆಯಾಗಲಿದೆ.

ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ನೀತಿ ಸಂಹಿತೆ ಜಾರಿಯಾದರೆ ಬೇರೆಲ್ಲಾ ಸರಕಾರಿ ಕಾರ್ಯಗಳು ವಿಳಂಬವಾಗುವ ಸಾಧ್ಯತೆ ಇದೆ. ಆದುದರಿಂದ ಬಜೆಟ್ ಮಂಡನೆಯಾಗಲಿದೆ. ಕಳೆದ ಸಾಲಿನಲ್ಲಿ 2023-24ನೇ ಸಾಲಿನಲ್ಲಿ 11,158 ಕೋಟಿ ರೂ. ಆದಾಯ ಬರುವ ಅಂದಾಜಿನಂತೆ 11,157 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಘೋಷಿಸಲಾಗಿತ್ತು.

ಈ ವರ್ಷ ಅತ್ಯಧಿಕ ಆದಾಯ ನಿರೀಕ್ಷೆಯ ಹಿನ್ನಲೆಯಲ್ಲಿ ಬಜೆಟ್ ಗಾತ್ರವನ್ನು 12 ಸಾವಿರ ಕೋಟಿಯಿಂದ 13 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಹಸಿರು ಬೆಂಗಳೂರು, ರಸ್ತೆ ಅಭಿವೃದ್ಧಿಯಂತಹ ಕೆಲವು ಯೋಜನೆಗಳಿಗೆ ಅನುದಾನ ಘೋಷಣೆ ಆಗಲಿದೆ. ಮಳೆಗಾಲದಲ್ಲಿ ತೊಂದರೆ ಮಾಡುತ್ತಿರುವ ರಸ್ತೆ ಅಂಡರ್ಪಾಸ್ ಗಳ ಸುಧಾರಣೆಗೆ ಹಣ ಹಂಚಿಕೆ ನಿರೀಕ್ಷೆ ಮಾಡಲಾಗಿದೆ ಇದರ ಜತೆಗೆ ಸರಕಾರದ ಬ್ರಾಂಡ್ ಬೆಂಗಳೂರು ಯೋಜನೆಗೆ 1500 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News