ಬೆಂಗಳೂರು : ರೋಗ ತಡೆಗಟ್ಟುವ ಆರೋಗ್ಯ ಸೇವೆ ಮತ್ತು ದೈನಂದಿನ ಪೌಷ್ಟಿಕ ಅಗತ್ಯಗಳ ಕುರಿತು ಹೆಚ್ಚಿನ ಅರಿವು ಮೂಡಿಸುವುದು ಆರೋಗ್ಯವಂತ ಸಮಾಜ ನಿರ್ಮಾಣದ ಪ್ರಮುಖ ಅಂಶಗಳಾಗಿವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

ಗುರುವಾರ ನಗರದಲ್ಲಿ ಮ್ಯಾಕ್ಸಿಮಸ್ ಲೈಫ್ ಸೈನ್ಸಸ್ ವತಿಯಿಂದ ಪುರುಷ ಮತ್ತು ಮಹಿಳೆಯರಿಗೆ ಸಂಬಂಧಿತ ಪೌಷ್ಠಿಕ ಪೂರಕ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪೌಷ್ಟಿಕಾಂಶ ಮತ್ತು ಕ್ಷೇಮವನ್ನು ಆರೋಗ್ಯದ ಕುರಿತಾದ ವಿಶಾಲಚರ್ಚೆಯ ಭಾಗವಾಗಿಸುವ ಇಂತಹ ಪ್ರಯತ್ನಗಳನ್ನು ನೋಡುವುದು ಸಂತಸದ ಸಂಗತಿಯಾಗಿದೆ ಎಂದರು.

ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಯ ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಬಲರಾಗಬೇಕು. ಅದೇ ಸಮಯದಲ್ಲಿ, ಪೌಷ್ಟಿಕ ಪೂರಕಗಳು ಸಮತೋಲಿತ ಆಹಾರ, ದೈಹಿಕ ಚಟುವಟಿಕೆ ಮತ್ತು ಸೂಕ್ತ ವೈದ್ಯಕೀಯ ಮಾರ್ಗದರ್ಶನಕ್ಕೆ ಪೂರಕವಾಗಿರಬೇಕು ಎಂದು ಯು.ಟಿ.ಖಾದರ್ ಹೇಳಿದರು.

ಮ್ಯಾಕ್ಸಿಮಸ್ ಲೈಫ್ ಸೈನ್ಸಸ್ ಕಂಪೆನಿಯ ಸಂಸ್ಥಾಪಕ ಡಾ.ರಾಜೀವ್ ಗೋಲ್ಚಾ, ಡಾ.ಲಲಿತ್ ಕುಮಾರ್ ಸೇರಿದಂತೆ ಹಲವು ವೈದ್ಯರು ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor