×
Ad

ರಾಮನಗರದ ರೈಲ್ವೆ ಸಮಸ್ಯೆ ಏನೇ ಇದ್ದರೂ ಬಗೆಹರಿಸುತ್ತೇನೆ : ವಿ.ಸೋಮಣ್ಣ

Update: 2024-11-03 18:49 IST

PC : x/@Nikhil_Kumar_k

ಬೆಂಗಳೂರು : ‘ರಾಮನಗರ ಜಿಲ್ಲೆಯ ರೈಲ್ವೆ ಇಲಾಖೆಯಿಂದ ಏನೇ ಸಮಸ್ಯೆ ಇದ್ದರೂ ನಾನು ಕೂಡಲೇ ಬಗೆಹರಿಸುತ್ತೇನೆ. ನಿಖಿಲ್‍ರನ್ನ ಗೆಲ್ಲಿಸಿ ಕೊಡಿ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

ರವಿವಾರ ಚನ್ನಪಟ್ಟಣದಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ದಿಲ್ಲಿಗೆ ಹೋಗಿ ರೈಲ್ವೆ ಸಮಸ್ಯೆಯನ್ನು ಬಗೆ ಹರಿಸುತ್ತೇವೆ. ನಿಮ್ಮ ಸೇವಕನಾಗಿ ನಿಮ್ಮ ಮುಂದೆ ಬಂದ್ದಿದಾನೆ. ಅವರಿಗೆ ಆಶೀರ್ವಾದ ಮಾಡಿ ಎಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಮ್ಮ ಜೊತೆ ಇದ್ದರು. ಆದರೆ, ಅವರು ಆತುರದಿಂದ ಅಧಿಕಾರದ ಆಸೆಗೆ ಪಕ್ಷ ತ್ಯಜಿಸಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗುವ ರೀತಿ ಮಾಡಬೇಕು ಎಂದ ಅವರು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನನಗೆ ಬೆಂಬಲ ಕೊಡದೇ ಇದ್ದರೆ ನಾನು ಕೇಂದ್ರ ಮಂತ್ರಿ ಆಗುತ್ತಾ ಇರಲಿಲ್ಲ ಎಂದರು.

ನಿಖಿಲ್‍ಗೆ ಅವರ ತಂದೆಯವರಿಗಿಂತ ಮುಂದೆ ಹೋಗುವ ಸಾಮಥ್ರ್ಯ ಇದೆ. ಕಾಂಗ್ರೆಸ್‍ನವರ ತುಮಕೂರಿನಲ್ಲಿ ಸೋಮಣ್ಣ ಸೋಲ್ತಾರೆ ಅಂದಿದ್ದರು. ಆಗ ದೇವೆಗೌಡ ಹಾಗೂ ಕುಮಾರಸ್ವಾಮಿ ಖುದ್ದು ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದರು ಎಂದ ಅವರು, ಚನ್ನಪಟ್ಟಣ ಮತ್ತು ಮದ್ದೂರು ಮಾರ್ಗ ಮಧ್ಯೆ ರೈಲ್ವೆ ನಿಲ್ದಾಣವನ್ನು ಮಾಡಿದರೆ ಉಪಯೋಗ ಆಗಲಿದ್ದು, ಅದನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News