×
Ad

ದೃಷ್ಟಿ ಇಲ್ಲದಿದ್ದರೂ ಶೇ.96 ಅಂಕ; ಯಕ್ಸಂಬಾ ಗ್ರಾಮದ ಅಮಿತ್ ಅದ್ಭುತ ಸಾಧನೆ

Update: 2026-04-26 12:52 IST

ಬೆಳಗಾವಿ : ಹುಟ್ಟಿನಿಂದಲೇ ದೃಷ್ಟಿಹೀನನಾಗಿರುವ ಅಮಿತ್ ಸಂಜಯ್ ಗಿಡ್ಡ, ಇತ್ತೀಚೆಗೆ ಪ್ರಕಟವಾದ SSLC ಪರೀಕ್ಷೆಯಲ್ಲಿ  ಶೇ.96 ಅಂಕ ಗಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಕೂಲಿ ಕಾರ್ಮಿಕನ ಮಗನಾಗಿರುವ ಅಮಿತ್, ಬಡತನದ ನಡುವೆಯೂ ಶಿಕ್ಷಣದ ಮೇಲಿನ ಆಸಕ್ತಿ ಕೈಬಿಡದೆ ಓದಿ ಸಾಧನೆ ಮಾಡಿದ್ದಾರೆ. 

ಸಂಗೀತದಲ್ಲೂ ಮೇಲುಗೈ:

ಅಮಿತ್ ಕೇವಲ ಓದಿನಲ್ಲಿ ಮಾತ್ರವಲ್ಲ, ಸಂಗೀತ ಕ್ಷೇತ್ರದಲ್ಲಿಯೂ ತನ್ನ ಪ್ರತಿಭೆ ತೋರಿದ್ದಾನೆ. ವಾದ್ಯಗಳನ್ನು ನುಡಿಸುವಾಗ ಜನರನ್ನು ಮಂತ್ರಮುಗ್ಧರನ್ನಾಗಿಸುವ ಸಾಮರ್ಥ್ಯ ಹೊಂದಿದ್ದಾನೆ.

ಅಮಿತ್ ಸಾಧನೆಗೆ ಯಕ್ಸಂಬಾ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News