×
Ad

ಬೆಳಗಾವಿ : ಬಾತ್‌ರೂಮ್‌ಗೆ ಹೋಗಿ ಬರುವುದಾಗಿ ಹೇಳಿ ತಪ್ಪಿಸಿಕೊಂಡ ಕೈದಿ; ಮತ್ತೆ ಪೊಲೀಸ್‌ ವಶಕ್ಕೆ

Update: 2025-10-29 08:50 IST

ಬೆಳಗಾವಿ: ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ತಪ್ಪಿಸಿಕೊಂಡು ಓಡಿಹೋಗಿದ್ದ ಕೈದಿಯನ್ನು ಬೆಳಗಾವಿ ನಗರದ ಹಿಂಡಲಗಾ ಪೊಲೀಸರು ಮತ್ತೆ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಬಂಧಿತ ಕೈದಿ. ಪೋಕ್ಸೋ ಕೇಸ್ ನಲ್ಲಿ 20ವರ್ಷಗಳ ಕಾಲ ಶಿಕ್ಷೆಗೆ ಒಳಪಟ್ಟ ಈತನನ್ನು ಅನಾರೋಗ್ಯದ ಹಿನ್ನೆಲೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕರೆತಂದಾಗ ಘಟನೆ ನಡೆದಿದೆ.

ಬೆಳಿಗ್ಗೆ 8.35ಕ್ಕೆ ಬಾತ್ ರೂಮಗೆ ಹೋಗಿ ಬರೋದಾಗಿ ಹೇಳಿ ತಪ್ಪಿಸಿಕೊಂಡು ಹೋಗಿದ್ದ ಕೈದಿ ಅನಿಲ್, ಸಂಜೆ ವೇಳೆಗೆ ಬೆಳಗಾವಿ ನಗರದ ಕೋರ್ಟ್ ಆವರಣ ಪಕ್ಕದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಇಡೀ ದಿನ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲೇ ಅಡಗಿಕೊಂಡು ಸಂಜೆ 6ಗಂಟೆ ಸಮಯದಲ್ಲಿ ಓಡಿಹೋಗಲು ಪ್ಲಾನ್ ಹಾಕಿದ್ದ ಈತನನ್ನು ಓಡಿಹೋಗುವ ವೇಳೆ ಕೋರ್ಟ್ ಆವರಣದ ಪಕ್ಕದಲ್ಲಿ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News