ಬಳ್ಳಾರಿ | ಮುದ್ದಟ್ಟನೂರಿನಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ
ಬಳ್ಳಾರಿ : ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಹಲವಾರು ಚಟುವಟಿಕೆ ಆಧಾರಿತ ವಿದ್ಯಾರ್ಥಿಗಳಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ಯಶಸ್ವಿಯಾಗಿವೆ ಎಂದು ಬಿ ಆರ್ ಪಿ ಸದಾನಂದಾಚಾರಿ ತಿಳಿಸಿದರು.
ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮುದ್ದಟ್ಟನೂರು ನವಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಿರಿಗೇರಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಂ.ಪಂ ಪಿಡಿಒ ವೀರೇಶ್, ಸಿ.ಆರ್.ಪಿ. ಅರುಣ್ ಕುಮಾರ್ ಮಾತನಾಡಿದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷ ಶೇಖರಪ್ಪ, ಎಸ್ ಡಿ ಎಮ್ ಸಿ ಅಧ್ಯಕ್ಷ ಡಿ.ಅಶೋಕ, ಸರ್ಕಾರಿ ನೌಕರರ ಸಂಘದ ಖಜಾಂಚಿ ಎಚ್.ದುರ್ಗಪ್ಪ, ಮುಖ್ಯ ಗುರುಗಳಾದ ಬಿ.ಆರ್.ಶಿವಕುಮಾರ್, ಗೋವಿಂದ ರಾಜು, ಪಂಚಾಕ್ಷರಯ್ಯ ಸ್ವಾಮಿ, ಯೋಗಿಸ್ ಪಾಲಿ, ಸುಮಂಗಳ ಮೇಟಿ, ಇಂದು, ರೇಣುಕಾ, ದಾದಾಪೀರ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.