×
Ad

ಬಳ್ಳಾರಿ | ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣಾ ವೇಳಾಪಟ್ಟಿ ಪ್ರಕಟ

Update: 2025-12-22 22:20 IST

ಬಳ್ಳಾರಿ, ಡಿ.22: ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿಗೆ ಪುರಸಭಾ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹಾರೀಸ್ ಸುಮೇರ್ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 310ರ ಪ್ರಕಾರ ಜಿಲ್ಲಾ ಯೋಜನಾ ಸಮಿತಿ ರಚಿಸಬೇಕಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ) 1996ರ 8ರ ನಿಯಮದ ಪ್ರಕಾರ ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿಗೆ ಪುರಸಭಾ ಮತಕ್ಷೇತ್ರಗಳಿಂದ ಪ್ರತ್ಯೇಕವಾಗಿ ಸದಸ್ಯರ ಆಯ್ಕೆ ಕುರಿತು ಚುನಾವಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ:

ಪುರಸಭಾ ಕ್ಷೇತ್ರದಿಂದ ಚುನಾಯಿಸಬೇಕಾದ ಸದಸ್ಯರ ಸಂಖ್ಯೆ: ಪುರಸಭಾ ಕ್ಷೇತ್ರದಿಂದ - 23 ಸದಸ್ಯರು (ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಮಹಾನಗರ ಪಾಲಿಕೆ ಚುನಾಯಿತ ಸದಸ್ಯರು).

ನಾಮಪತ್ರ ಸ್ವೀಕರಿಸುವ ದಿನಾಂಕ, ಸಮಯ ಮತ್ತು ಸ್ಥಳ (ಸಾರ್ವಜನಿಕ ರಜಾದಿನ ಹೊರತುಪಡಿಸಿ): ಡಿ.22ರಿಂದ 31ರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ, ಸ್ಥಳ: ಜಿಲ್ಲಾ ಪಂಚಾಯತ್‌ನ ಪಿಎಇಒ ಕೊಠಡಿ ಯೋಜನಾ ಶಾಖೆ.

ನಾಮಪತ್ರ ಪರಿಶೀಲಿಸುವ ದಿನಾಂಕ, ದಿನ, ಸಮಯ ಮತ್ತು ಸ್ಥಳ: 2026ರ ಜನವರಿ 2 (ಶುಕ್ರವಾರ) ಬೆಳಗ್ಗೆ 11 ಗಂಟೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನ ಪಿಎಇಒ ಕೊಠಡಿ ಯೋಜನಾ ಶಾಖೆ.

ನಾಮಪತ್ರ ಹಿಂಪಡೆಯುವ ಕೊನೆ ದಿನಾಂಕ, ದಿನ ಮತ್ತು ಸಮಯ: 2026ರ ಜನವರಿ 05 (ಸೋಮವಾರ) ಮಧ್ಯಾಹ್ನ 3 ಗಂಟೆಯವರೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನ ಪಿಎಇಒ ಕೊಠಡಿ ಯೋಜನಾ ಶಾಖೆ.

ಮತದಾನ ಅಗತ್ಯವಾದಲ್ಲಿ ಮತದಾನ ನಡೆಸಬೇಕಾದ ದಿನಾಂಕ, ದಿನ, ಸಮಯ ಮತ್ತು ಸ್ಥಳ: 2026ರ ಜನವರಿ 12 (ಸೋಮವಾರ) ಬೆಳಗ್ಗೆ 9 ರಿಂದ ಸಂಜೆ 4ರವರೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣ.

ಮತ ಎಣಿಕೆ ದಿನಾಂಕ, ಸಮಯ ಮತ್ತು ಸ್ಥಳ: 2026 ರ ಜನವರಿ 12 (ಸೋಮವಾರ) ಸಂಜೆ 5 ಗಂಟೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣ.

2026ರ ಜನವರಿ 13 (ಮಂಗಳವಾರ) ಸಂಜೆ 5 ಗಂಟೆಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹಾರೀಸ್ ಸುಮೇರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News