Kampli | ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಕೆ.ಎಸ್.ಚಾಂದ್ ಬಾಷಾ
ಕಂಪ್ಲಿ: ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಒಕ್ಕೂಟದ ಮೂಲಕ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ, ಶಾಲೆಗಳ ಅಭಿವೃದ್ಧಿಗೆ ಕಂಕಣಬದ್ಧವಾಗಿ ಶ್ರಮಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ನೂತನ ಅಧ್ಯಕ್ಷ ಕೆ.ಎಸ್. ಚಾಂದ್ ಬಾಷಾ ಭರವಸೆ ನೀಡಿದರು.
ಪಟ್ಟಣದ ಸಣಾಪುರ ರಸ್ತೆಯ ರೈನ್‌ಬೋ ಗ್ಲೋಬಲ್ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಒಕ್ಕೂಟದ ವಾರ್ಷಿಕ ಮಹಾಜನ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಷ್ಟಪಟ್ಟು ಕಟ್ಟಿರುವ ಈ ಒಕ್ಕೂಟದ ಪ್ರಗತಿಗಾಗಿ ಶ್ರಮಿಸುತ್ತೇನೆ. ಎಲ್ಲ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ಮೇಲೆ ಇಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದಾಗಿ ಅವರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ :
ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಜಾ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸುರೇಶಕುಮಾರ, ಖಜಾಂಚಿಯಾಗಿ ಬಸವರಾಜ, ಸಹ ಕಾರ್ಯದರ್ಶಿಯಾಗಿ ನರಸಪ್ಪ ಗಾಣದಾಳ್ ಹಾಗೂ ಕಾನೂನು ಸಲಹೆಗಾರರಾಗಿ ಸೋಮನಾಥ ಹೆಬ್ಬಡದ ಆಯ್ಕೆಯಾದರು.
ಸದಸ್ಯರಾಗಿ ಎಂ. ಮಾರುತಿ, ಕೆ. ಹನುಮಂತಪ್ಪ, ಡಿ. ಷಣ್ಮುಕಪ್ಪ, ಪವನಕುಮಾರ ಗಂಗಾವತಿ, ವಿರುಪಾಕ್ಷಪ್ಪ ಮಹಾಂತಿ, ಹೆಚ್. ಶರಣಪ್ಪ, ಗಾಳೆಪ್ಪ, ಸಿ. ವೆಂಕಟೇಶ, ವಿನಾಯಕ, ರವಿ ಗೋನಾಳು ಹಾಗೂ ಮೈಬೂಬ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎ. ತಾಂಡವ ಕೃಷ್ಣ, ಶಾಲಾ ಆಡಳಿತ ಮಂಡಳಿಯ ಮುಖಂಡರಾದ ಪ್ರಭಾಕರ ಗೋಡೆ, ಎಚ್.ಎಂ. ವಿಶ್ವೇಶ್ವರಯ್ಯಸ್ವಾಮಿ, ಮುತ್ತಣ್ಣ ನಂದ್ಯಾಳ್, ಶಂಕರ್ ರ‍್ರಂಗಳ್ಳಿ, ಎಂ. ಮೌಲಾಲಿ, ಬಿ. ಜಿಲಾನಸಾಬ್, ಶಿವುಕುಮಾರ ದೇವಸಮುದ್ರ, ರಾಮಮೋಹನ್, ಬಿ.ಎಲ್. ಸರ್ವೇಶ್ ಹಳೆಕೋಟೆ, ವಿರುಪಾಕ್ಷಪ್ಪಗೌಡ ಮಾಲಿ ಪಾಟೀಲ್ ಹಾಗೂ ಎನ್. ನಾಗಪ್ಪ ಉಪಸ್ಥಿತರಿದ್ದರು.