Sandur | ತೋರಣಗಲ್ಲು ರೈಲ್ವೆ ನಿಲ್ದಾಣಕ್ಕೆ ‘ಕುರೇಕುಪ್ಪ’ ಎಂದು ಮರುನಾಮಕರಣಕ್ಕೆ ಆಗ್ರಹ
ಸಂಡೂರು: ತೋರಣಗಲ್ಲು ರೈಲ್ವೆ ನಿಲ್ದಾಣಕ್ಕೆ ‘ಕುರೇಕುಪ್ಪ ರೈಲ್ವೆ ನಿಲ್ದಾಣ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಕುರೇಕುಪ್ಪ ಪುರಸಭೆ ಘಟಕದ ಪದಾಧಿಕಾರಿಗಳು ಸಂಸದರ ಕಚೇರಿಗೆ ಮನವಿ ಸಲ್ಲಿಸಿದರು.
ಸಂಸದರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕ ಎನ್. ಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಕುರೇಕುಪ್ಪ ಘಟಕದ ಪದಾಧಿಕಾರಿ ಹೊನ್ನೂರುಸ್ವಾಮಿ, ಕುರೇಕುಪ್ಪ ಪಟ್ಟಣದ ಐತಿಹಾಸಿಕ ಹಾಗೂ ಸ್ಥಳೀಯ ಅಸ್ಮಿತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸುವುದು ಅಗತ್ಯವಾಗಿದೆ ಎಂದರು.
ಈ ಕುರಿತು ರೈಲ್ವೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ಸಂಸದರ ಶಿಫಾರಸು ಪತ್ರವನ್ನು ಶೀಘ್ರವಾಗಿ ನೀಡಬೇಕು. ಶಿಫಾರಸು ಪತ್ರ ದೊರೆತ ಕೂಡಲೇ ಅದನ್ನು ರೈಲ್ವೆ ಇಲಾಖೆಗೆ ಸಲ್ಲಿಸಿ, ಮರುನಾಮಕರಣ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು. ಬಹುದಿನಗಳ ಈ ಬೇಡಿಕೆ ಈಡೇರುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಕುರೇಕುಪ್ಪ ಘಟಕದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.