ಸಿರುಗುಪ್ಪ | ದಲಿತಪರ ಸಂಘಟನೆಗಳಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ
Update: 2026-01-01 21:18 IST
ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದ ಬೃಹತ್ ಮೆರವಣಿಗೆಗೆ ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್‌ನ ತಾಲೂಕಾಧ್ಯಕ್ಷ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸರ್ವಧರ್ಮೀಯ ಸಂಘಟನೆಯ ಗೌರವಾಧ್ಯಕ್ಷ ಬಿ.ಎಂ.ಸತೀಶ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸರ್ವಧರ್ಮೀಯ ಸಂಘಟನೆಯ ಅಧ್ಯಕ್ಷ ಡಾ.ಕೊಡ್ಲೆ ಮಲ್ಲಿಕಾರ್ಜುನ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕಾಧ್ಯಕ್ಷ ಚಿಕ್ಕಬಳ್ಳಾರಿ ನಾಗಪ್ಪ ಮಾತನಾಡಿದರು.
ತಾಲೂಕು ಕ್ರೀಡಾಂಗಣದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ರಾಜಬೀದಿಯಲ್ಲಿ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ದಲಿತಪರ ಸಂಘಟನೆಗಳ ಮುಖಂಡರಾದ ವೀರೇಶ, ಎಚ್.ಗಣೇಶ, ದರಗಪ್ಪ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.