×
Ad

ಸಿರುಗುಪ್ಪ | ಕೆಂಚನಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ

Update: 2025-12-31 17:09 IST

ಸಿರುಗುಪ್ಪ: ತಾಲೂಕಿನ ಕೆ ತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಕೆಂಚನಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಪೋಷಕರೊಂದಿಗೆ ಆಟ, ಆರೋಗ್ಯ ಮತ್ತು ಪೌಷ್ಟಿಕಾಂಶ ಸ್ಪರ್ಧೆ, ಸಂತೋಷದಾಯಕ ಗಣಿತ, ಕಥೆ ಹೇಳುವ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಕಲಿಕೆಯನ್ನು ಆನಂದದಾಯಕವಾಗಿಸುವ ಉದ್ದೇಶದಿಂದ ಈ ಸ್ಪರ್ಧೆಗಳು ನಡೆಯಿತು.

ಶಿಕ್ಷಣ ಸಂಯೋಜಕರಾದ ಜ್ಞಾನೇಶ್ವರ ಹಾಗೂ ಬಿಆರ್‌ಪಿ ಗಜೇಂದ್ರ ಅವರು ಕಾರ್ಯಕ್ರಮದ ರೂಪರೇಖೆಯನ್ನು ಸಿದ್ಧಪಡಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಎಂ.ಟಿ. ಶಾಂತ, ಶಾಲೆಯ ಮುಖ್ಯ ಶಿಕ್ಷಕಿ ಕೆ.ವಿ. ನಾಗರತ್ನಮ್ಮ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾಕಾ ಹಾಗೂ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯ ಎನ್‌ಪಿಎಫ್‌ಎಲ್‌ಎನ್‌ಎಸ್ ಘಟಕದ ಉಪಾಧ್ಯಕ್ಷರಾದ ಎರಪ್ಪಗೌಡ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಟಿ.ಶಾಂತ, ಮಕ್ಕಳಲ್ಲಿ ಕಲಿಕಾ ನ್ಯೂನ್ಯತೆ ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಉದ್ಘಾಟನಾ ನುಡಿಗಳನ್ನು ಜ್ಞಾನೇಶ್ವರ ಹಾಗೂ ಗಜೇಂದ್ರ ಅವರು ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘ ಬಳ್ಳಾರಿಯ ಸಂಘಟನಾ ಕಾರ್ಯದರ್ಶಿ ಗೀತಾ, ಶಿಕ್ಷಕರ ಸಂಘದ ನೂತನ ಕಾರ್ಯದರ್ಶಿ ಶರಣಮ್ಮ, ಹಿರಿಯ ಬಡ್ತಿ ಮುಖ್ಯಗುರುಗಳಾದ ಮಹದೇವಪ್ಪ, ರವಿಕುಮಾರ್, ಶಿವಾಜಿ ನಾಯಕ, ಲೋಕೇಶ್ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News