×
Ad

ಕಂಪ್ಲಿ | ದೇಶದ ಅಭ್ಯುದಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ: ಶಾಸಕ ಜೆ.ಎನ್.ಗಣೇಶ

Update: 2025-12-29 20:30 IST

ಕಂಪ್ಲಿ : ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಉದಯಿಸಿದ ಕಾಂಗ್ರೆಸ್ ಪಕ್ಷ ದೇಶದ ಒಟ್ಟಾರೆ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌ನ 140ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಂತರ ಅವರು ಮಾತನಾಡಿದರು.

‘ಬಡವರು, ದೀನ ದಲಿತರ ಸಬಲೀಕರಣಕ್ಕೆ ಶ್ರಮಿಸುತ್ತ ಬಂದಿದೆ. ಅಲ್ಲದೆ ರಸ್ತೆಗಳ ಅಭಿವೃದ್ಧಿ, ಉನ್ನತೀಕರಣ, ಕೃಷಿ ನೀರಾವರಿ ಮತ್ತು ವೈಜ್ಞಾನಿಕ ಕ್ಷೇತ್ರಗಳಿಗೆ ನೀಡಿದ ಮಹತ್ವವನ್ನು ದೇಶ ಗುರುತಿಸಿದೆ. ಭವಿಷ್ಯದಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ತನ್ನ ತತ್ವ ಮತ್ತು ಬದ್ಧತೆಯೊಂದಿಗೆ ಜನರ ಏಳಿಗೆಗೆ ಶ್ರಮಿಸಲಿದೆ’ ಎಂದರು.

ಈ ಸಂದರ್ಭದಲ್ಲಿ ಭಟ್ಟ ಪ್ರಸಾದ್, ಬಿ.ಜಾಫರ್, ಷಣ್ಮುಖಪ್ಪ, ಕಡಪ ಮಾಸ್ತನ್ ವಲಿ, ವಿರೂಪಾಕ್ಷಪ್ಪ, ರೇಣುಕಪ್ಪ, ರಾಘವೇಂದ್ರಸ್ವಾಮಿ, ಸತ್ಯಪ್ಪ, ಕೃಷ್ಣ ಸೇರಿದಂತೆ ವಿವಿಧ ವಿಭಾಗಗಳ ಮುಂಚೂಣಿಯ ಪದಾಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News