×
Ad

ಬೆಂಗಳೂರು | "ನಾನೂ ಒಬ್ಬ ತಂದೆ-ಅಣ್ಣಾ" : ಆಟೋದಲ್ಲಿನ ಬರಹವನ್ನು ಪೋಸ್ಟ್‌ ಮಾಡಿದ ಯುವತಿ

ಪೋಸ್ಟ್‌ ವೈರಲ್‌ ಆಗುತ್ತಿದಂತೆ ಆಟೋ ಚಾಲಕನ ಮಾಹಿತಿ ಕೇಳಿದ ಪೊಲೀಸರು !

Update: 2025-12-13 14:09 IST

ಬೆಂಗಳೂರು : ಇತ್ತೀಚೆಗೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದೆ. ವಿಶೇಷವಾಗಿ ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಮರಳುವ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗಿದೆ. ನಡೆದುಕೊಂಡು ಹೋಗುವಾಗ ಹಾಗೂ ವಿವಿಧ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಲವು ಉದಾಹರಣೆಗಳು ಕಂಡುಬರುತ್ತಿವೆ.

ಇಂತಹ ಆತಂಕದ ನಡುವೆ ಬೆಂಗಳೂರಿನ ಒರ್ವ ಆಟೋ ಚಾಲಕನ ನಡೆ ಎಲ್ಲರ ಗಮನ ಸೆಳೆದಿದೆ. ಚಾಲಕನ ಸೀಟಿನ ಹಿಂದಿನ ಭಾಗದಲ್ಲಿ ‘ನಾನೂ ಒಬ್ಬ ಅಣ್ಣ/ತಂದೆ. ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ’ ಎಂಬ ಬರಹವನ್ನು ಬರೆದು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಧೈರ್ಯ ತುಂಬಿದ್ದಾರೆ.

ಈ ಬರಹವನ್ನು ಗಮನಿಸಿದ ಯುವತಿಯೊಬ್ಬರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ರಾತ್ರಿ 12 ಗಂಟೆಗೆ ರ್‍ಯಾಪಿಡೊ ಆಟೊದಲ್ಲಿ ಪ್ರಯಾಣಿಸುತ್ತಿದ್ದೆ. ಆಟೊದಲ್ಲಿ ಕುಳಿತ ತಕ್ಷಣ ಈ ಬರಹ ಓದಿದೆ. ಆಗ ನನಗೆ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡಿತು’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ಆ ಆಟೊ ಚಾಲಕನ ಹೆಸರು ಅಥವಾ ವಿವರಗಳನ್ನು ಅವರು ಹಂಚಿಕೊಂಡಿಲ್ಲ.

ಆಟೊ ಚಾಲಕನ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಆಟೋ ಚಾಲಕನ ಮಾಹಿತಿ ಕೇಳಿದ ಪೊಲೀಸರು :

ಯುವತಿಯ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಬೆಂಗಳೂರು ಪೊಲೀಸರು ಎಕ್ಸ್‌ ನಲ್ಲಿ ಪೋಸ್ಟ್‌ ಹಂಚಿಕೊಂಡು, ʼಒಂದು ಸಣ್ಣ ಸಂದೇಶ ಒಂದು ದೊಡ್ಡ ಸೂಚಕ. ಬೆಂಗಳೂರಿಗರೇ ಆತನನ್ನು ತಲುಪಲು ಸಹಕರಿಸಿ. ಆತನ ಬಗ್ಗೆ ಏನಾದರು ಮಾಹಿತಿ ಸಿಕ್ಕಲ್ಲಿ ನಮ್ಮನ್ನು ಸಂಪರ್ಕಿಸಿʼ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News