Bengaluru | ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಟೆಕ್ಕಿಗೆ ವಂಚನೆ ಪ್ರಕರಣ: ನಕಲಿ ಗುರೂಜಿಯ ಸಹಚರರ ಬಂಧನ
Update: 2025-12-11 00:24 IST
ಬೆಂಗಳೂರು: ಇತ್ತೀಚೆಗೆ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಐಟಿ ಉದ್ಯೋಗಿ ತೇಜಸ್ ಅವರಿಗೆ 48 ಲಕ್ಷ ರೂ. ವಂಚಿಸಿದ ನಕಲಿ ಗುರೂಜಿ ವಿಜಯ್ ಎಂಬಾತನನ್ನು ಬಂಧಿಸಿದ್ದ ಜ್ಞಾನಭಾರತಿ ಪೊಲೀಸರು, ಇದೀಗ ಆತನ ಇಬ್ಬರು ಸಹಚರನನ್ನೂ ಬಂಧಿಸಿದ್ದಾರೆ.
ವಿಜಯ್ ಮತ್ತು ಆತನ ಸಹಚರರಿಂದ ಮೋಸ ಹೋದ ಟೆಕ್ಕಿ ತೇಜಸ್, ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಾಗ ಪೊಲೀಸರಲ್ಲಿ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ನನ್ನು ಬಂಧಿಸಲಾಗಿತ್ತು. ಇದೀಗ ಆತನ ಸಹಚರರನ್ನು ತೆಲಂಗಾಣದ ಸೈಬರಬಾದ್‍ನಲ್ಲಿ ಸೆರೆಹಿಡಿಯಲಾಗಿದೆ.
ಪೊಲೀಸರು ಬಂಧಿತರಿಂದ 19.50 ಲಕ್ಷ ರೂ. ಹಣ ಮತ್ತು ಒಂದು ಟಿ.ಟಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್‍ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಪಿಗಳು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನೂ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ ಎಂದು ವರದಿಯಾಗಿದೆ.