×
Ad

ಬಸವಾದಿ ಶಿವಶರಣರ ಬೃಹತ್ ಹಿಂದು ಸಮಾವೇಶ ಶಾಂತಿ ಸೌಹಾರ್ದತೆಯಿಂದ ನಡೆಯಲಿದೆ: ರಾಜೇಶ್ವರ್ ಶಿವಾಚಾರ್ಯ ಸ್ವಾಮಿಜಿ

Update: 2026-06-11 21:31 IST

ಬಸವಕಲಾಣ: ನಗರದಲ್ಲಿ ನಡೆಯಲಿರುವ ಬಸವಾದಿ ಶಿವ ಶರಣರ ಬೃಹತ್ ಹಿಂದೂ ಸಮಾವೇಶ ಶಾಂತಿ ಸೌಹಾರ್ದತೆಯಿಂದ ನಡೆಯಲಿದೆ ಎಂದು ರಾಜೇಶ್ವರ್ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.

ಜೂ. 28ರಂದು ನಡೆಯಲಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ನೆತೃತ್ವದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಸಮಾವೇಶದ ಅಂಗವಾಗಿ ನಗರದಲ್ಲಿ ಬುಧವಾರ ಕಾರ್ಯಕ್ರಮದ ಅಂಗವಾಗಿ ಕಾರ್ಯಾಲಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಬಸವಾದಿ ಶಿವಶರಣರ ಸಮಾವೇಶವು ಯಾವುದೇ ಗೊಂದಲ ಹಾಗೂ ಸಮಸ್ಯಗಳಿಲ್ಲದೆ ಶಾಂತಿ ಸೌಹಾರ್ದತೆಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 300ಕ್ಕಿಂತ ಹೆಚ್ಚು ಮಠಾಧಿಶರು ಭಾಗಿಯಾಗಲಿದ್ದಾರೆ. ಬಸವಣ್ಣನವರ ಪಾವನ ಭೂಮಿಯಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು. ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವವರು ನಮ್ಮ ಜೊತೆ ಚರ್ಚೆಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಈ ವಿಷಯದ ಕುರಿತು ಚರ್ಚಿಸೋಣ. ಎಲ್ಲರೂ ಸೇರಿ ಪ್ರೇಮದಿಂದ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

ಈ ಸಂದರ್ಭದಲ್ಲಿ ಘನಲಿಂಗ ರುದ್ರಮುನಿ ಶಿವಾಚಾರ್ಯ, ಪ್ರಣವಾನಂದ್ ಸ್ವಾಮಿ, ಅಭಿನವ್ ಘನಲಿಂಗ್ ರುದ್ರಮುನಿ ಶಿವಾಚಾರ್ಯ, ಸಿಂದನಕೇರಾದ ಶ್ರೀ, ಲೀಕೇಶ್ ಮಹಾರಾಜ್, ಗುಂಡುರೆಡ್ಡಿ ಆರ್, ಜಿ. ಎಸ್ ಭೂರಾಳೆ, ಡಾ. ಬಸವರಾಜಸ್ವಾಮಿ, ಡಾ. ಧನರಾಜ್ ಚೆಂದನಕೇರಾ, ಡಾ. ಮಠಪತಿ, ಬಸವರಾಜ್ ಕೊರಕೆ, ಗುರುನಾಥ್ ವಡ್ಡೆ, ಸಿದ್ರಾಮ್ ಗುದ್ಗೆ, ದತ್ತು ಬೆಂಡೆ, ದೀಪಕ್ ಗಾಯಕವಾಡ್, ಸಂದೀಪ್ ಪಾಟೀಲ್, ಶಿವಕುಮಾರ್ ದಾಬಕೆ, ಶ್ರೀಕಾಂತ್ ಕಾಂಬಳೆ, ರವಿ ನವದ್ಗೆಕರ್ ಹಾಗೂ ಲೊಕೇಶ್ ಮೊಳಕೆರೆ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News