Bidar | ಕಾಣೆಯಾದ ಯುವಕನ ಪತ್ತೆಗೆ ಮನವಿ
ಬೀದರ್: ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮಲಾಪುರ ಗ್ರಾಮದ 22 ವರ್ಷದ ಯುವಕ ರಾಹುಲ್ ತಂದೆ ಶರಣಪ್ಪ ಮಚಕುರಿ ಕಾಣೆಯಾಗಿದ್ದು, ಅವರ ಬಗ್ಗೆ ಮಾಹಿತಿ ಇರುವವರು ಪೊಲೀಸರಿಗೆ ತಿಳಿಸುವಂತೆ ಗಾಂಧಿಗಂಜ್ ಪೊಲೀಸ್ ಠಾಣೆಯ ಪೊಲೀಸರು ಮನವಿ ಮಾಡಿದ್ದಾರೆ.
ಈ ಕುರಿತು ರಾಹುಲ್ ಅವರ ಅಕ್ಕ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪ್ರಕಾರ, ರಾಹುಲ್ ಹೈದರಾಬಾದ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಜುಲೈ 28ರ ರಾತ್ರಿ ಕುಟುಂಬದವರು ಒಟ್ಟಿಗೆ ಊಟ ಮಾಡಿದ ಬಳಿಕ ಮಲಗಲು ತೆರಳಿದ್ದರು. ಆ ವೇಳೆ ರಾಹುಲ್ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದು, ಫೋನ್ ಇಟ್ಟು ಮಲಗುವಂತೆ ಹೇಳಲಾಗಿತ್ತು.
ರಾತ್ರಿ ಸುಮಾರು 11 ಗಂಟೆಗೆ ಮನೆಯವರು ಮಲಗಿದ ಬಳಿಕ ಮಧ್ಯರಾತ್ರಿ ಎಚ್ಚರವಾದಾಗ ರಾಹುಲ್ ಮನೆಯಲ್ಲಿ ಇರಲಿಲ್ಲ. ಮನೆಯ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ರಾಹುಲ್ ಅವರ ಮೊಬೈಲ್ ಫೋನ್ ಮಾತ್ರ ಮನೆಯಲ್ಲೇ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಣೆಯಾದ ರಾಹುಲ್ ಸುಮಾರು 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಕಪ್ಪು ಗೆರೆಯುಳ್ಳ ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಅವರು ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ.
ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಗಾಂಧಿಗಂಜ್ ಪೊಲೀಸ್ ಠಾಣೆ (08482-226233 / 94808 03448 / 08482-200396) ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.