ಬೀದರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯ ವಿವಿಧ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 110 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 326 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕುವಾರು ಖಾಲಿ ಹುದ್ದೆಗಳ ವಿವರ ಹೀಗಿದೆ: ಬೀದರ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ 27 ಅಂಗನವಾಡಿ ಕಾರ್ಯಕರ್ತೆಯರು ಮತ್ತು 103 ಸಹಾಯಕಿಯರು, ಭಾಲ್ಕಿ ವ್ಯಾಪ್ತಿಯಲ್ಲಿ 15 ಕಾರ್ಯಕರ್ತೆಯರು ಮತ್ತು 43 ಸಹಾಯಕಿಯರು, ಬಸವಕಲ್ಯಾಣ ವ್ಯಾಪ್ತಿಯಲ್ಲಿ 25 ಕಾರ್ಯಕರ್ತೆಯರು ಮತ್ತು 43 ಸಹಾಯಕಿಯರು, ಹುಲಸೂರು ವ್ಯಾಪ್ತಿಯಲ್ಲಿ ಒಬ್ಬ ಕಾರ್ಯಕರ್ತೆ ಮತ್ತು 10 ಸಹಾಯಕಿಯರು, ಹುಮನಾಬಾದ್ ವ್ಯಾಪ್ತಿಯಲ್ಲಿ 6 ಕಾರ್ಯಕರ್ತೆಯರು ಮತ್ತು 34 ಸಹಾಯಕಿಯರು, ಚಿಟಗುಪ್ಪಾ ವ್ಯಾಪ್ತಿಯಲ್ಲಿ 3 ಕಾರ್ಯಕರ್ತೆಯರು ಮತ್ತು 25 ಸಹಾಯಕಿಯರು, ಸಂತಪುರ ವ್ಯಾಪ್ತಿಯಲ್ಲಿ 28 ಕಾರ್ಯಕರ್ತೆಯರು ಮತ್ತು 56 ಸಹಾಯಕಿಯರು ಹಾಗೂ ಕಮಲನಗರ ವ್ಯಾಪ್ತಿಯಲ್ಲಿ 5 ಕಾರ್ಯಕರ್ತೆಯರು ಮತ್ತು 12 ಸಹಾಯಕಿಯರ ಹುದ್ದೆಗಳು ಖಾಲಿ ಇವೆ.

ಅರ್ಹ ಮಹಿಳಾ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ https://bidar.nic.in/ ಮೂಲಕ ನವೆಂಬರ್ 11ರಿಂದ ಡಿಸೆಂಬರ್ 11ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೀದರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor