×
Ad

ಬೀದರ್ | ಬಸವ ಜಯಂತಿ ಮಾನವ ಪ್ರೀತಿ, ಘನತೆಯ ಸಂಕೇತ : ಬಸವರಾಜ್ ಧನ್ನೂರ್

Update: 2025-04-30 20:37 IST

ಬೀದರ್ : ಬಸವ ಜಯಂತಿಯು ಮಾನವ ಪ್ರೀತಿ ಹಾಗೂ ಘನತೆಯ ಸಂಕೇತವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಧನ್ನೂರ್ ಅವರು ಹೇಳಿದರು.

ಇಂದು ನಗರದ ಗಾಂಧಿಗಂಜ್ ನಲ್ಲಿರುವ ಜಾಗತಿಕ ಲಿಂಗಾಯತ ಮಹಾಸಭಾದ ಕಚೇರಿಯಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬಸವಣ್ಣನವರು ಪ್ರೀತಿಯಿಂದ ಜಗತ್ತನ್ನು ಕಟ್ಟಬಹುದು ಎಂದು ತೋರಿಸಿದ್ದಾರೆ. ಪ್ರೀತಿ ಹಾಗೂ ಗೌರವದಿಂದ ಎಂತಹ ಅನಾಚಾರಿಯನ್ನಾದರೂ ಸದಾಚಾರಿಯನ್ನಾಗಿ ಪರಿವರ್ತಿಸಬಹುದು ಎಂದು ಅವರು ಪ್ರತಿಪಾದಿಸಿದ್ದರು. ಅಷ್ಟು ಮಾತ್ರವಲ್ಲದೆ, ಅದನ್ನು ಮಾಡಿ ತೋರಿಸಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸುವರ್ಣಾ ಧನ್ನೂರ್, ಪ್ರಧಾನ ಕಾರ್ಯದರ್ಶಿ ಜಯದೇವಿ ಯದಲಾಪುರೆ, ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ, ಕಾರ್ಯಕಾರಿಣಿ ಸದಸ್ಯರಾದ ಮಲ್ಲಿಕಾರ್ಜುನ್ ಪಂಚಾಕ್ಷರಿ, ಉಮೇಶ್ ಗಾಯಗೊಂಡ, ರಾಷ್ಟ್ರೀಯ ಬಸವ ದಳದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ರವಿ ಪಾಪಡೆ, ಪ್ರಮುಖರಾದ ಬಸವರಾಜ್ ಜಕ್ಕಾ, ನಾಗಶೆಟ್ಟಿ ಧರಂಪುರ್, ಗುರು ಹಜ್ಜರಗಿ, ವೀರಶೆಟ್ಟಿ ಮರಕಲ್, ಯೋಗೇಶ್ ಸಿರಿಗೇರಿ ಹಾಗೂ ಜೆ.ಕೆ.ಮಠಪತಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News