ಔರಾದ್ | ಡಿ.30ರಂದು ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
Update: 2025-12-26 19:24 IST
ಔರಾದ್ : ತಾಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಿ.30ರಂದು ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಎಲ್ಲಾ ಭಾಗಗಳಿಂದ ಸಾರ್ವಜನಿಕರು, ಯುವಕರು ಆಗಮಿಸಿ ರಕ್ತದಾನ ಮಾಡಬೇಕು ಎಂದು ಸಂತಪೂರ್ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರತಿಕಾಂಟ್ ಸ್ವಾಮಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಕ್ತದಾನ ಮಾಡಲು ಬಯಸುವರು 94484 69744, ಹಾಗೂ ಡಾ. ಸಿದ್ದರಡ್ಡಿ 96638 59062 ಅವರಿಗೆ ಫೋನ್ ಮಾಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.