ಬೀದರ್| ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
Update: 2025-12-27 18:41 IST
ಸಾಂದರ್ಭಿಕ ಚಿತ್ರ
ಬೀದರ್ : ಜನವಾಡ ಪೊಲೀಸ್ ಠಾಣೆಯ ವ್ಯಾಪ್ತಿಯ ಇಸ್ಲಾಂಪುರ್ ಗ್ರಾಮದ ರಸ್ತೆ ಸಮೀಪ ನದಿ ನೀರಿನಲ್ಲಿ ಅಪರಿಚಿತ ಪುರುಷನ ರುಂಡವಿಲ್ಲದ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಲಾಂಪುರ್ ಗ್ರಾಮದ ರಸ್ತೆ ಹತ್ತಿರವಿರುವ ಬ್ರಿಡ್ಜ್ ಸಮೀಪದ ನದಿ ನೀರಿನಲ್ಲಿ ಅಂದಾಜು 35 ರಿಂದ 40 ವರ್ಷ ವಯಸ್ಸಿನ ಪುರುಷನ ಮೃತದೇಹ ರುಂಡ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಎರಡು ಕಾಲುಗಳನ್ನು ಮತ್ತು ದೇಹವನ್ನು ವಿದ್ಯುತ್ ವೈರ್ ನಿಂದ ಕಟ್ಟಲಾಗಿತ್ತು.
ಈ ಕುರಿತು ಇಸ್ಲಾಂಪುರ್ ಗ್ರಾಮದ ನಿವಾಸಿ ಯಲ್ಲಾಲಿಂಗ್ ಅವರು ಜನವಾಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಮೃತದೇಹದ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.