×
Ad

Bidar | ಕುಂಬಾರವಾಡದಲ್ಲಿ ಅಂಬೇಡ್ಕರ್ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡುವಂತೆ ಧರಣಿ

Update: 2026-06-12 22:13 IST

ಬೀದರ್: ನಗರದ ಕುಂಬಾರವಾಡ ಪ್ರದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಹಾಗೂ ರಮಾತಾಯಿ ಮಹಿಳಾ ಸಂಘದ ಸದಸ್ಯರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದರು.

ಕುಂಬಾರವಾಡ ಮುಖ್ಯರಸ್ತೆಯಲ್ಲಿರುವ ಸಂತೋಷ್ ಅವರ ಮನೆ ಸಮೀಪದ 75×80 ಅಡಿ ವಿಸ್ತೀರ್ಣದ ಖಾಲಿ ಜಾಗವನ್ನು ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಮೀಸಲಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಳೆದ 25 ವರ್ಷಗಳಿಂದ ಇದೇ ಸ್ಥಳದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮೆ, ಅಶೋಕ ವಿಜಯದಶಮಿ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕುಂಬಾರವಾಡದಲ್ಲಿ ವಿವಿಧ ಸಮುದಾಯಗಳಿಗೆ ಸಂಬಂಧಿಸಿದ ಸಮುದಾಯ ಭವನಗಳಿದ್ದರೂ, ಅಂಬೇಡ್ಕರ್ ಸಮುದಾಯ ಭವನ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಜೂನ್ 9ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಜಾಗ ಮಂಜೂರು ಮಾಡುವ ಭರವಸೆ ದೊರೆತಿದೆ. ಆದರೂ ವಿಳಂಬ ಮಾಡದೆ ಜಾಗ ಮಂಜೂರು ಮಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಿ ಸಮುದಾಯ ಭವನ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮ ನಡೆಸಬೇಕು ಎಂದು ಒತ್ತಾಯಿಸಿದರು.

ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಷ್ಟೇ ಅಲ್ಲದೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಶಾಸಕ ರಹೀಂ ಖಾನ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿಲ್ಲಮ್ಮ, ಪ್ರಭಾವತಿ, ನರಸಮ್ಮ, ಲಕ್ಷ್ಮೀಬಾಯಿ, ಸುಲೋಚನಾ, ಗುಜ್ಜಮ್ಮ, ಸುಹಾಸಿನಿ, ಅಂಬಿಕಾ, ಗಂಗಮ್ಮ, ರಮಾಬಾಯಿ, ಜ್ಯೋತಿ, ಚಿನ್ನಮ್ಮ, ಸರಸ್ವತಿ, ಶೋಭಾ, ದ್ರೌಪದಿ, ಸುಮಿತ್ರಾ, ಶ್ರೀದೇವಿ, ಅಕ್ಕಮ್ಮ, ಕಾಶಿಬಾಯಿ, ತುಳಜಮ್ಮ, ಶರಣಮ್ಮ, ಕಲಾವತಿ, ಶಿವಲಿಂಗಪ್ಪ, ಸಿದ್ದಪ್ಪ, ತುಕಾರಾಮ್, ಶ್ರೀಧರ್, ಅನಿಲ್, ಸತೀಶ್, ಭರತ್ ಕಾಂಬಳೆ, ಸಂತೋಷ್, ಶ್ರೀಧರ್ ಕಳೆಕಾರ್, ಸಾಯಿನಾಥ್, ದಿಗಂಬರ್, ದೀಪಕ್, ದಿಲೀಪ್, ಕಾಶಿನಾಥ್, ಸದಾನಂದ್, ಸಂಜುಕುಮಾರ್, ಅಡೆಪ್ಪ, ಸಿದ್ದಾರ್ಥ್ ಹಾಗೂ ಲೋಕೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News