×
Ad

Bidar | ಮಗುವಿನ ಜೊತೆಗೆ ಮಹಿಳೆ ನಾಪತ್ತೆ : ಪತ್ತೆಗೆ ಮನವಿ

Update: 2026-07-02 18:00 IST

ಬೀದರ್‌ : ಜಿಲ್ಲೆಯ ಔರಾದ್(ಎಸ್)‌ ಗ್ರಾಮದ ಹಾಗೂ ಪ್ರಸ್ತುತ ನೌಬಾದ್‌ನಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಮಗುವಿನ ಜೊತೆಗೆ ಕಾಣೆಯಾಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ನೂತನ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರಂಜೀತಾ (29) ಹಾಗೂ ನಿಹಾರಿಕಾ (4) ಈ ಇಬ್ಬರು ಕಾಣೆಯಾದ ತಾಯಿ ಮಗಳಾಗಿದ್ದಾರೆ. ಇವರು ಮೇ.13 ರಂದು ಫಂಕ್ಷನ್‌ನಲ್ಲಿ ಊಟ ಬಡಿಸುವ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿ ಮರಳಿ ಮನೆಗೆ ಬರಲಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆ ರಂಜಿತಾ 29 ವರ್ಷದವರಾಗಿದ್ದು, 5 ಫೀಟ್ 2 ಇಂಚ್‌ ಎತ್ತರ, ದುಂಡು ಮುಖ, ಗಿಡ್ಡ ಮೂಗು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದಾರೆ. ಕಪ್ಪು ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಬಿಳಿ ಪ್ರಿಂಟ್‌ವುಳ್ಳ ಕುರ್ತಾ ಬಟ್ಟೆ ಧರಿಸಿದ್ದಾರೆ. ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಮಗು ನಿಹಾರಿಕಾ (4) ವರ್ಷದವಳಾಗಿದ್ದು, 2 ಫೀಟ್ 5 ಇಂಚು ಎತ್ತರ, ದುಂಡು ಮುಖ, ನೇರ ಮೂಗು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದಾಳೆ. ಹಸಿರು ಬಣ್ಣದ ಫ್ರಾಕ್ ಬಟ್ಟೆ ಧರಿಸಿರುವ ಇಕೆ, ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬಗ್ಗೆ ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಕಾಣೆಯಾದವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ನ್ಯೂ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೇಕ್ಟರ್ ಮೋ: 94808 03446, ಬೀದರ್ ನಿಯಂತ್ರಣ ಕೊಠಡಿ ದೂ.ಸಂ.: 08482-226704, ನ್ಯೂ ಟೌನ್ ಪೊಲೀಸ್ ಠಾಣೆ ದೂ.ಸಂ. 08482 228256ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News