ಬೀದರ್‌: ಜಾತಿ ಪ್ರಮಾಣ ಪತ್ರ ಮಂಜೂರಿಗೆ ವಿಳಂಬವಾಗುತ್ತಿದೆ ಆದ್ದರಿಂದ ಸರ್ಕಾರಿ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿ ಕರವೇ ಸಂಘಟನೆಯಿಂದ ಮನವಿ ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಸೋಮವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವಿದ್ಯಾವಂತ ನಿರುದ್ಯೋಗಿಗಳಿಗಾಗಿ ನೌಕರಿ ನೇಮಕಾತಿಗಾಗಿ ಸಂಬಂಧಪಟ್ಟಿರುವ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಿಲಾಗಿದೆ. ಶೈಕ್ಷಣಿಕ ದಾಖಲಾತಿಗಳೊಂದಿಗೆ ವಿದ್ಯಾರ್ಥಿಗಳು ಹೊಂದಿರುವ ಜಾತಿ ಪ್ರಮಾಣ ಪತ್ರ, 371 (ಜೆ) ಪ್ರಮಾಣ ಪತ್ರ. ಆದಾಯ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಮೀಸಲಾತಿ ಪ್ರಮಾಣ ಪತ್ರಗಳು ಅವಶ್ಯವಾಗಿವೆ. ಜಿಲ್ಲೆಯ ಎಲ್ಲಾ ನಾಡ ಕಛೇರಿಯಲ್ಲಿ ಸಂಬಂಧಪಟ್ಟಿರುವ ದಾಖಲಾತಿಗಳೊಂದಿಗೆ ನೌಕರಿಗೆ ಅರ್ಹತೆ ಹೊಂದಿರುವ ವಿದ್ಯಾವಂತರು ಮೀಸಲಾತಿ ಪ್ರಮಾಣ ಪತ್ರಗಳಿಗಾಗಿ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ಒಳಗೆ ಪ್ರಮಾಣ ಪತ್ರಗಳು ಸಿಗದ ಭಯದಲ್ಲಿದ್ದಾರೆ ಎಂದು ತಿಳಿಸಲಾಗಿದೆ.

ಆದ್ದರಿಂದ ತಾವು ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಗಳಲ್ಲಿ ನಮೂದಿಸಿರುವಂತೆ, ಮಿಸಲಾತಿ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಜಾತಿ ಎ, ಪರಿಶಿಷ್ಟ ಜಾತಿ ಬಿ, ಪರಿಶಿಷ್ಟ ಪಂಗಡ, ಟೋಕರಿಕೊಳ್ಳಿ, ಎಸ್ಟಿ ಗೊಂಡ, ಹಿಂದುಗಳಿದ ವರ್ಗಗಳ ಪ್ರಮಾಣ ಪತ್ರ ಅಲ್ಪಸಂಖ್ಯಾತರ ಪ್ರಮಾಣ ಪತ್ರಗಳು, ಸಾಮಾನ್ಯ ವರ್ಗದ ಪ್ರಮಾಣ ಪತ್ರಗಳು ಓಬಿಸಿ ಪ್ರಮಾಣ ಪತ್ರಗಳು ಅಗತ್ಯ ಕ್ರಮಗಳನ್ನು ತೇಗೆದುಕೊಂಡು, ಸಂಬಂಧಪಟ್ಟಿರುವ ಅಧಿಕಾರಿಗಳಿಗೆ ಸೂಚಿಸಿ, ನೌಕರಿಗೆ ಸಲ್ಲಿಸಬೇಕಾಗಿರುವ ಅವಧಿಯೊಳಗೆ ಮಂಜೂರು ಮಾಡಿ ನೀಡಿದ್ದಲ್ಲಿ, ವಿದ್ಯಾವಂತರಿಗೆ ಅನೂಕೂಲವಾಗುತ್ತದೆ ಎಂದು ಮನವಿ ಮಾಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿಗದಿಪಡಿಸಿರುವ ಅವದಿಯನ್ನು ಸಂಬಂಧಪಟ್ಟಿರುವ ಅಧಿಕಾರಿಗಳಿಗೆ ಸೂಚಿಸಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕರವೇ ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ಜೋನಾ ಪಿ.ಜೆ, ಜಿಲ್ಲಾ ಘಟಕದ ಅಧ್ಯಕ್ಷ ಅವಿನಾಶ್ ಬುದೇರಾಕರ್ ಹಾಗೂ ಸ್ಟೀಫನ್ ಪೌಲ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor