ಸಂತೋಷ್ ಲಾಡ್ ಸಚಿವರಾಗಿ ನೇಮಕ; ಬೀದರ್‌ನಲ್ಲಿ ಸಕಲ ಮರಾಠಾ ಸಮಾಜದಿಂದ ವಿಜಯೋತ್ಸವ
ಬೀದರ್, ಆ.5: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ಸಕಲ ಮರಾಠಾ ಸಮಾಜದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ನಗರದ ಶಿವಾಜಿ ಚೌಕ್‌ನಲ್ಲಿ ಸಮಾಜದ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಾದಾ ಮಹಾರಾಜ ನಗರಕರ್ ಮಾತನಾಡಿ, ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಸಮಾಜದಲ್ಲಿ ಒಂದೊಂದು ಜವಾಬ್ದಾರಿ ಇರುತ್ತದೆ. ಜನಸೇವೆಯನ್ನು ಧ್ಯೇಯವಾಗಿಟ್ಟುಕೊಂಡು ತಳಮಟ್ಟದ ಸ್ಥಳೀಯ ಸಂಸ್ಥೆಯಿಂದ ರಾಜಕೀಯ ಜೀವನ ಆರಂಭಿಸಿ ಸಚಿವ ಸ್ಥಾನಕ್ಕೇರಿರುವ ಸಂತೋಷ್ ಲಾಡ್ ಅವರ ರಾಜಕೀಯ ಪಯಣ ಮಾದರಿಯಾಗಿದೆ ಎಂದು ಹೇಳಿದರು.
ಪತ್ರಕರ್ತ ಪ್ರದೀಪ್ ಬಿರಾದಾರ್ ಮಾತನಾಡಿ, ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಸಂತಸದ ಸಂಗತಿ. ಅಧಿಕಾರವನ್ನು ಜನಸೇವೆಯ ಅವಕಾಶವಾಗಿ ಪರಿಗಣಿಸಿ ಅವರು ಮತ್ತಷ್ಟು ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಸತೀಶ್ ಮುಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಕಿಶನರಾವ್ ಪಾಟೀಲ್ ಇಂಚುರಕರ್, ಸಮಾಜದ ಮುಖಂಡ ಅಮರ್ ಜಾಧವ್, ಸುರೇಶ್ ಟಾಕಳೆ, ವಿದ್ಯಾವಾನ್ ಪಾಟೀಲ್, ಸಂದೀಪ್ ಪಾಟೀಲ್, ಡಿಸೊಜಾ, ಸತ್ಯದೀಪ್ ಬಿರಾದಾರ್, ಮಿನಾಕ್ಷಿ, ಅನಿತಾ ಭೋಸ್ಲೆ, ಮೀರಾತಾಯಿ ಮುಳೆ, ಉಷಾ ಸೂರ್ಯವಂಶಿ, ಸುರೇಶ್ ಹಲವಾಯಿ, ಅಶೋಕ್ ಪಾಟೀಲ್, ಶಿವಾಜಿ ಪಾಟೀಲ್ ಹಾಗೂ ರಾಜೇಶ್ವರಿ ಸೇರಿದಂತೆ ಅನೇಕರು ಇದ್ದರು.