ಎಸ್‌ಐಆರ್ : ಬೀದರ್ ಜಿಲ್ಲೆಯಲ್ಲಿ ಒಟ್ಟು 12,33,779 ಅರ್ಜಿ ವಿತರಣೆ, 1,70,366 ಅರ್ಜಿ ಸ್ವೀಕಾರ
ಬೀದರ್: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಬೀದರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಜುಲೈ 9ರವರೆಗೆ ಒಟ್ಟು 12,33,779 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, 1,70,366 ಭರ್ತಿ ಮಾಡಿದ ನಮೂನೆಗಳು ಸ್ವೀಕೃತಗೊಂಡಿವೆ ಎಂದು ಚುನಾವಣಾ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 2,26,400 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, 30,884 ಅರ್ಜಿಗಳು ಸ್ವೀಕೃತಗೊಂಡಿವೆ. ಹುಮನಾಬಾದ್ ಕ್ಷೇತ್ರದಲ್ಲಿ 2,13,719 ನಮೂನೆಗಳನ್ನು ವಿತರಿಸಿ 25,093 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಭಾಲ್ಕಿ ಕ್ಷೇತ್ರದಲ್ಲಿ 1,78,758 ನಮೂನೆಗಳನ್ನು ವಿತರಿಸಿ 57,561 ಅರ್ಜಿಗಳು ಸ್ವೀಕೃತಗೊಂಡಿವೆ.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ 2,07,501 ನಮೂನೆಗಳನ್ನು ವಿತರಿಸಿ 19,591 ಅರ್ಜಿಗಳನ್ನು, ಬೀದರ್ ಕ್ಷೇತ್ರದಲ್ಲಿ 2,01,152 ನಮೂನೆಗಳನ್ನು ವಿತರಿಸಿ 17,909 ಅರ್ಜಿಗಳನ್ನು ಹಾಗೂ ಔರಾದ್ (ಬಿ) ಕ್ಷೇತ್ರದಲ್ಲಿ 2,06,249 ನಮೂನೆಗಳನ್ನು ವಿತರಿಸಿ 19,328 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಒಟ್ಟಾರೆ ಜಿಲ್ಲೆಯಾದ್ಯಂತ 12,33,779 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, 1,70,366 ಭರ್ತಿ ಮಾಡಿದ ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಚುನಾವಣಾ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.