ಚಳ್ಳಕೆರೆ: ಜಗದೀಶ್ ಜಿ.ವಿ ಅವರಿಗೆ ಡಾಕ್ಟರೇಟ್‌ ಪದವಿ

Update: 2024-01-14 08:27 GMT

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದ ಜಗದೀಶ್ ಜಿ.ವಿ. ಅವರ ʼಆಧುನಿಕ ಕರ್ನಾಟಕದ ಕನ್ನಡ ಸಂಘಟನೆಗಳು: ಚರಿತ್ರೆ ಮತ್ತು ವಿಮರ್ಶೆʼ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು 32ನೇ ಘಟಿಕೋತ್ಸವದಲ್ಲಿ (ಪಿಎಚ್‌ಡಿ) ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. 

ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದ ಗೌಡ್ರು ಕಮಲಮ್ಮ-ವಿರೂಪಾಕ್ಷಪ್ಪ ದಂಪತಿಯ ಪುತ್ರ ಜಗದೀಶ್ ಜಿ.ವಿ. ಅವರು, ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ್ ಪೂಣಚ್ಚ ತಂಬಂಡ ಅವರಿಂದ ಪಿಎಚ್.ಡಿ ಸಂಶೋಧನೆಗೆ ಮಾರ್ದರ್ಶನ ಪಡೆದಿದ್ದಾರೆ. ಜಗದೀಶ್ ಅವರ ಸಂಶೋಧನೆಯ ವಿಷಯವು ಆಧುನಿಕ ಕರ್ನಾಟಕದ ಕನ್ನಡ ಸಂಘಟನೆಗಳನ್ನು ವಿಸ್ತೃತವಾಗಿ ಅಧ್ಯಯನಕ್ಕೊಳಪಡಿಸಿದ ಮೊದಲ ಪಿಎಚ್.ಡಿ ಮಹಾಪ್ರಬಂಧವಾಗಿದೆ.

 ರೈತ ಕುಟುಂಬದ ಹಿನ್ನೆಲೆಯುಳ್ಳ ಜಗದೀಶ್ ಜಿ.ವಿ. ಅವರ ಈ ಸಾಧನೆಯನ್ನು ಮಾರ್ಗದರ್ಶಕರಾದ ವಿಜಯ್ ಪೂಣಚ್ಚ ಹಾಗೂ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ.ಮೋಹನ್ ಕೃಷ್ಣ ರೈ, ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮತ್ತು ಡಾ.ಎನ್. ಚಿನ್ನಸ್ವಾಮಿ ಸೋಸಲೆ ಅವರು ಅಭಿನಂದಿಸಿದ್ದಾರೆ.

ಯಲಗಟ್ಟೆ ಗ್ರಾಮಕ್ಕೆ ಮೊದಲ ಡಾಕ್ಟರೇಟ್ ಪದವಿಯನ್ನು ತಂದುಕೊಟ್ಟ ಜಗದೀಶ್‌ ಅವರ ಸಾಧನೆಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ. ಸೂರನಹಳ್ಳಿ ಹಾಗೂ ಚೌಳೂರು ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಮುಗಿಸಿದ ಜಗದೀಶ್ ಅವರು ತಮ್ಮ ಜೀವನದ ಅಮೋಘ ಘಳಿಗೆಯಲ್ಲಿ ತಮ್ಮ ಈ ವರೆಗಿನ ಎಲ್ಲಾ ಅಧ್ಯಾಪಕರನ್ನು ಸ್ಮರಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News