×
Ad

ಗುಂಡ್ಲುಪೇಟೆ | ರೇಜರ್ ಬ್ಲೇಡ್ ನಿಂದ ತಂತಿ ಬೇಲಿ ನಿರ್ಮಾಣ ; ಕ್ರಮಕ್ಕೆ ಆಗ್ರಹ

Update: 2025-08-29 00:05 IST

ಚಾಮರಾಜನಗರ : ಜಿಲ್ಲೆಯ ಬಂಡೀಪುರದ ಕುಂದುಗೆರೆ ವಲಯದ ಜಮೀನೊಂದರಲ್ಲಿ ಕಾಡು ಪ್ರಾಣಿಗಳ ದಾಳಿ ತಡೆಗಟ್ಟಲು ರೇಜರ್ ಬ್ಲೇಡ್ ನಿಂದ ತಂತಿ ಬೇಲಿ ನಿರ್ಮಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್ಗಳ ಹಾವಳಿಯಿಂದ ಕಂಗೆಟ್ಟಿದ್ದ ವನ್ಯಪ್ರಾಣಿಗಳಿಗೀಗ ರೇಜರ್ ಬ್ಲೇಡ್ ಸೋಲಾರ್ ಪೆನ್ಸಿಂಗ್ ಸಂಕಷ್ಟ ಎದುರಾಗಿರುವುದು ಬೆಳಕಿಗೆ ಬಂದಿದೆ.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮಂಗಲ ಗ್ರಾಮದ ಸಮೀಪ ಸೆಂಥಿಲ್ ಕುಮಾರ್ ಎಂಬವರು ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ತರುವಂತಹ ಅಪಾಯಕಾರಿ ಬೇಲಿ ಅಳವಡಿಸಿ ಪರಿಸರವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆಕಸ್ಮಾತ್ ವನ್ಯಪ್ರಾಣಿಗಳೇನಾದ್ರು ಬೇಲಿ ಪ್ರವೇಶಿಸುವ ಪ್ರಯತ್ನ ಮಾಡಿದರೆ ದೇಹವನ್ನು ಕತ್ತರಿಸುವಂತಹ ಬ್ಲೇಡ್ ಗಳನ್ನು ಅಳವಡಿಸಿರುವುದು ಕಂಡು ಬಂದಿದೆ.

ಸದ್ಯ ಪ್ರಾಣಿಗಳ ಜೀವಕ್ಕೆ ಕಂಟಕವಾಗಿರುವ ಬ್ಲೇಡ್ ಸೋಲಾರ್ ಬೇಲಿ ಅಳವಡಿಸಿರುವ ವ್ಯಕ್ತಿಯ ವಿರುದ್ಧ ಅರಣ್ಯ ಇಲಾಖೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಜೋಸೆಫ್ ಹೂವರ್ ಎಂಬವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News