×
Ad

ಚಾಮರಾಜನಗರ | 1.92 ಕೋಟಿ ಅವ್ಯವಹಾರ: 23 ಮಂದಿ ವಿರುದ್ಧ ಎಫ್‌ಐಆರ್

Update: 2025-07-21 00:42 IST

ಚಾಮರಾಜನಗರ : ಚಾಮರಾಜನಗರ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘ ಹಾಗೂ ಆದಿ ಕರ್ನಾಟಕ ಹಾಸ್ಟೆಲ್ ಬಿಲ್ಡಿಂಗ್ ಸಂಘದಲ್ಲಿ 1 ಕೋಟಿ 92 ಲಕ್ಷ ರೂ. ಅವ್ಯವಹಾರ ನಡೆದಿರುವುದು ವಿಚಾರಣಾ ವರದಿಯಲ್ಲಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸಂಘದ 23 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ವರದಿಯಾಗಿದೆ.

ಸಂಘದ ಆಡಳಿತಾಧಿಕಾರಿಯಾಗಿರುವ ಕೊಳ್ಳೇಗಾಲ ಉಪವಿಭಾಗಾಧಿಕಾರಿ ನೀಡಿರುವ ದೂರಿನಂತೆ ಚಾಮರಾಜನಗರ ಠಾಣೆಯಲ್ಲಿ ನೀಡಿರುವ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಮಹೇಶ್ ಬಿ.ಆರ್. ನೀಡಿರುವ ದೂರಿನಲ್ಲಿ, 1974ರಿಂದ 2024-25ರ ಅವಧಿಯಲ್ಲಿ ಚಾಮರಾಜನಗರ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಡಳಿತ ಮಂಡಳಿಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ ಸೇರಿದಂತೆ 23 ಸದಸ್ಯರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ತಿಳಿಸಿದ್ದಾರೆ.

ಆಡಳಿತಾಧಿಕಾರಿಗಳ ದೂರಿನಂತೆ ಪೊಲೀಸ್ ಠಾಣೆಯಲ್ಲಿ ನಂಜುಂಡಸ್ವಾಮಿ, ಎಚ್.ಎಂ.ಕೆಂಪಯ್ಯ, ಎಂ.ಮಾದಯ್ಯ, ಹನುಮಯ್ಯ, ಮಲ್ಲಿಕಾರ್ಜುನ, ಮಲ್ಲೇದೇವರು, ಪುಟ್ಟಸ್ವಾಮಿ, ಎನ್.ರಾಜಗೋಪಾಲ್ , ಪುಟ್ಟಸ್ವಾಮಿ, ಲಕ್ಷ್ಮೀನರಸಿಂಹ, ಬಸವರಾಜು, ಎಂ.ಬಸವರಾಜು, ಎಸ್.ಮಹದೇವಯ್ಯ, ಕೆ.ಕಾಂತರಾಜು, ಟಿ.ಕೆ.ರಂಗಯ, ಪ್ರಕಾಶ್, ವೆಂಕಟೇಶ್ , ನಾಗರಾಜು, ನಂಜಯ್ಯ, ಕೆ.ನಾಗರಾಜ್, ಎ.ಎಸ್.ಮಲ್ಲಣ್ಣ, ಸಿ.ಕೆ.ರವಿಕುಮಾರ್, ಪಾರ್ವತಮ್ಮ ವಿರುದ್ಧ ಪ್ರಕರಣ ದಾಖಲಿಸಿ ಎಫ್ ಐ ಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News