×
Ad

ಚಾಮರಾಜನಗರ | ಶ್ರೀಗಂಧ ಮರದ ತುಂಡುಗಳ ಸಾಗಾಟ : ನಾಲ್ವರ ಬಂಧನ

Update: 2024-07-01 16:57 IST

ಚಾಮರಾಜನಗರ : ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳ ಸಾಗಾಣಿಕೆಯಲ್ಲಿ ನಿರತರಾಗಿದ್ದ ಬಾಲಾಪರಾಧಿ ಸೇರಿ ನಾಲ್ಕು ಮಂದಿಯನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ಶ್ರೀಗಂಧ ತುಂಡುಗಳ ಸಹಿತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬಂಧಿಸಿದ್ದಾರೆ.

ಬಂಧಿತರನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಚನ್ನೇಗೌಡ ಬಡಾವಣೆಯ ಗಂಗಾಧರ್ ಅಲಿಯಾಸ್ ರಮೇಶ್ (23), ಕೊಳ್ಳಗೇರಿ ಗ್ರಾಮದ ಮಹೇಂದ್ರ (18), ಶಿವಶಂಕರ್ (20) ಓರ್ವ ಬಾಲಾಪರಾಧಿ (17)  ಎಂದು ಗುರುತಿಸಲಾಗಿದೆ

ಈ ವೇಳೆ ಬೊಲೆರೋ ವಾಹನ ಹಾಗೂ ಸುಮಾರು 123ಕೆ.ಜಿ ತೂಕದ 10 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಅರಣ್ಯ ಇಲಾಖಾಧಿಕಾರಿಗಳಿಗೆ ಹಸ್ತಾಂತರಿಸಿ, ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News