×
Ad

ಚಾಮರಾಜನಗರ: ಕಾರಿನ ಮೇಲೆ ಬಸ್ ಪಲ್ಟಿ; ಹತ್ತಕ್ಕೂ ಅಧಿಕ ಮಂದಿಗೆ ಗಾಯ

Update: 2024-11-08 11:26 IST

ಚಾಮರಾಜನಗರ : ಖಾಸಗಿ ಬಸ್ಸೊಂದು ಕಾರಿನ ಮೇಲೆ ಪಲ್ಪಿ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ಕರ್ನಾಟಕ ತಮಿಳುನಾಡು ಮುಖ್ಯ ರಸ್ತೆಯಲ್ಲಿ ಶುಕ್ರವಾರ ಸಂಭವಿಸಿದೆ.

ಹನೂರು ತಾಲ್ಲೂಕಿನ ಪಿ ಜಿ ಪಾಳ್ಯ ಸಮೀಪ ಹೊಸ ದೊಡ್ಡಿ ಗ್ರಾಮದ ರಸ್ತೆಯಲ್ಲಿ  ಘಟನೆ ನಡೆದಿದ್ದು, ಕಾರು ಇಲ್ಲದಿದ್ದರೆ ಬಸ್ ಪ್ರಪಾತಕ್ಕೆ ಉರುಳುವ ಸಾಧ್ಯತೆ ಇದ್ದು, ಹೆಚ್ಚಿನ ದುರಂತ ಸಂಭವಿಸುತ್ತಿತ್ತು ಎನ್ನಲಾಗಿದೆ.

ಹನೂರು ತಾಲೂಕಿನ ಒಡೆಯರಪಾಳ್ಯದಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ರಾಮಾಪುರದಿಂದ ಬಣ್ಣಾರಿ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಈ ಅವಘಡ ಸಂಭವಿಸಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಕಾರು ನುಗ್ಗಿದ ಪರಿಣಾಮ ಎರಡು ವಾಹವೂ ಜಖಂ ಆಗಿದೆ ಗಾಯಾಳುಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News